ಕೊರೋನಾ ಸೋಂಕಿನಿಂದ ಮತ್ತೆ ಮೂವರು ನಿಧನ

ಕಲಬುರಗಿ.ಸೆ.22: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯ ಮತ್ತೆ ಮೂವರು ನಿಧನರಾಗಿರುವ ಬಗ್ಗೆ ಮಂಗಳವಾರ ವರದಿಯಾಗಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 262ಕ್ಕೆ ಏರಿಕೆಯಾಗಿದೆ ಎಂದು
ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ತಿಳಿಸಿದ್ದಾರೆ.

ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಸೇಡಂ ಪಟ್ಟಣದ ಕೆ.ಇ.ಬಿ. ಕಾಲೋನಿಯ 58 ವರ್ಷದ ಮಹಿಳೆ (P-332010) ಆ.27 ರಂದು ಆಸ್ಪತ್ರೆಗೆ ದಾಖಲಾಗಿ ಆ.30 ರಂದು ನಿಧನ ಹೊಂದಿದ್ದಾರೆ.

ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಕಲಬುರಗಿಯ ಶಿವಾಜಿ ನಗರದ 73 ವರ್ಷದ ವೃದ್ಧ (P-456787) ಸೆ.19 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಸೆ.22 ರಂದು ನಿಧನರಾಗಿದ್ದಾರೆ.

ಐ‌.ಎಲ್.ಐ. ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದ 45 ವರ್ಷದ ಪುರುಷ (P-500188) ಸೆ.17 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.