ಕೊರೋನಾ ಸೋಂಕಿನಿಂದ ಪೋಷಕರಿಬ್ಬರನ್ನುಕಳೆದುಕೊಂಡ ಬಾಲಕರಿಗೆ ಲಾಪ್‍ಟಾಪ್ ವಿತರಣೆ

ಕಲಬುರಗಿ,ಸೆ.6:ಕೋವಿಡ್ ಸೋಂಕಿನಿಂದ ಪೋಷಕರಿಬ್ಬರನ್ನು ಕಳೆದುಕೊಂಡ ಅಫಜಲಪೂರ ತಾಲೂಕಿನ ಗೊಬ್ಬುರವಾಡಿ ತಾಂಡಾದ ಒಂದೇ ಕುಟುಂಬದ ಅಣ್ಣ-ತಮ್ಮನಾಗಿರುವ ಕು.ವಿಶಾಲ ತಂದೆ ದಿ. ದವಾಜು ಪವಾರ ಹಾಗೂ ಕು. ಅಭಿಷೇಕ ತಂದೆ ದಿ. ದವಾಜು ಪವಾರ ಅವರಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಮಂಗಳವಾರ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಲ್ಯಾಪ್‍ಟಾಪ್ ವಿತರಿಸಿದರು.
ಕೋವಿಡ್ ಸೋಂಕಿನಿಂದ ಪೋಷಕರಿಬ್ಬರನ್ನು ಕಳೆದುಕೊಂಡ ಎಸ್.ಎಸ್.ಎಲ್.ಸಿ. ಪೂರ್ಣಗೊಳಿಸಿ ಐ.ಟಿ.ಐ. ಓದುತ್ತಿರುವ ಕು.ವಿಶಾಲ ಮತ್ತು ಪ್ರಥಮ ಪಿ.ಯು.ಸಿ(ಕಲಾ) ವ್ಯಾಸಂಗ ಮಾಡುತ್ತಿರುವ ಕು. ಅಭಿಷೇಕ ಈ ಇಬ್ಬರು ಫಲಾನುಭವಿಗಳಿಗೆ ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಹಾಗೂ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂತೆ 35 ಸಾವಿರ ಮೊತ್ತದ ಲ್ಯಾಪ್‍ಟಾಪ್ ನೀಡಲಾಯಿತು. ಈ ಇಬ್ಬರು ವಿಸ್ತøತ ಕುಟುಂಬದ ಆರೈಕೆಯಲ್ಲಿ ಪಾಲನೆ, ಪೋಷಣೆ ಮತ್ತು ರಕ್ಷಣೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಣ್ಣ ದೇಸಾಯಿ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ, ಬಸವರಾಜ ಹೆಚ್ ಅವರು ಉಪಸ್ಥಿತರಿದ್ದರು.