ಕೊರೋನಾ ಸೋಂಕಿನಿಂದ ಇಬ್ಬರು ವೃದ್ಧರು ಸೇರಿ ಮೂವರ ನಿಧನ:170 ಪಾಸಿಟಿವ್

ಕಲಬುರಗಿ.ಏ.4: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು ವೃದ್ಧರು ಸೇರಿ ಮೂವರು ನಿಧನರಾಗಿದ್ದಾರೆ ಎಂದು ರವಿವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ಸಾರಿ ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡ, ಶ್ವಾಸಕೋಸ ತೊಂದರೆ, ಕಿಡ್ನಿ ಹಾಗೂ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಕಲಬುರಗಿಯ ಮೋಮಿನಪುರ ಪ್ರದೇಶದ ಪುಟಾಣಿ ಗಲ್ಲಿಯ 92 ವರ್ಷದ ವೃದ್ಧ ಮಾ.29 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ, ಏ.1 ರಂದು ನಿಧನ ಹೊಂದಿದ್ದಾರೆ.
ಅದೇ ರೀತಿ ಸಾರಿ ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಕಲಬುರಗಿಯ ಸಂತ್ರಾಸವಾಡಿ ಪ್ರದೇಶದ 59 ವರ್ಷದ ಪುರುಷ ಏ.1 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ, ಏ.2 ರಂದು ನಿಧನ ಹೊಂದಿದ್ದಾರೆ.
ಇದಲ್ಲದೆ ಸಾರಿ ಹಿನ್ನೆಲೆ ಜೊತೆಗೆ ಟಿ.ಬಿ. ಸಮಸ್ಯೆಯಿಂದ ಬಳಲುತ್ತಿದ್ದ ಚಿಂಚೋಳಿ ತಾಲೂಕಿನ‌ ಚಿಮ್ಮನಚೋಡ್ ಗ್ರಾಮದ 65 ವರ್ಷದ ವೃದ್ಧ ಮಾ.31 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ, ಏ.2 ರಂದು ನಿಧನ ಹೊಂದಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಸೋಂಕಿನಿಂದ 349 ಜನ ನಿಧನರಾಗಿದ್ದಾರೆ.
ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 170 ಪಾಸಿಟಿವ್ ಪ್ರಕರಣ ವರದಿಯಾಗಿದ್ದು ,
ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 24539 ಪಾಸಿಟಿವ್ ಕೇಸ್ ಗ ಲಾದಂತಾಗಿದೆ. 83 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 22834 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.1356 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.