ಕೊರೋನಾ ಸೇನಾನಿಗಳಿಗೆ ವಿಶೇಷ ಸನ್ಮಾನ

ವಡಗೇರಾ.ನ.4; ತಾಲ್ಲೂಕು ಘಟಕದ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಸನ್ಮಾನಿಸಲಾಯಿತು
ವಡಗೇರಿ: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ವತಿಯಿಂದ ವಡಗೇರ ಪಟ್ಟಣದಲ್ಲಿ ರಾಜ್ಯೋತ್ಸವ ಅಂಗವಾಗಿ ಕೊರೋನಾ ಸೇನಾನಿಗಳಿಗೆ ಸನ್ಮಾನಿಸುವ ಮೂಲಕ ವಿನೂತನವಾಗಿ ರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕರವೇ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರು ದ್ವಜಾರೋಹಣ ನೆರವೇರಿಸಿ ನಂತರ ಕೊರೋನಾ ಸೇನಾನಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿ ಕನ್ನಡ ನಾಡು ನುಡಿಯ ಹಬ್ಬದಂದು ಈ ಬಾರಿ ಕೊರೋನಾ ವಕ್ಕರಿಸಿರುವುದರಿಂದ ಸಂಭ್ರಮಕ್ಕೆ ಅಡ್ಡಿಯಾಗಿರಬಹುದು ಆದರೆ ಸೇನಾನಿಗಳ ಸನ್ಮಾನಿಸುವ ಮೂಲಕ ಕೊರೊನಾ ಎದುರಿಸಲು ಸನ್ನದ್ದರಿರಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸ0ಘಟನಾ ಕಾರ್ಯದರ್ಶಿ ಹಣಮಂತ ತೆಕರಾಳ, ಸತೀಶ್ ಜಡಿ, ಶ್ರೀನಿವಾಸ ಮಡಿವಾಳ, ರಾಘವೇಂದ್ರ ಕೋಪುರ, ಪೀರ ಅಹ್ಮದ್ ಮರಡಿ, ವೆಂಕಟೇಶ್ ಬೊಜ್ಜಿ, ಭೀಮಣ್ಣ ಬೂದಿನಾಳ, ದೇವು ಜಡಿ, ಮಹಮ್ಮದ್ ಖತಾಲಿ, ಬಸವರಾಜ ಕೊದ್ದಡಿ ಪಾಲ್ಗೊಂಡಿದ್ದರು.
ವಡಗೇರಿಯ ಪ್ರಮುಖರಾದ ಬಸವರಾಜ ಸೊನ್ನದ, ಮರೆಪ ಜಡಿ, ಬಸವರಾಜ ನೀಲಹಳಿ, ಹೃಶಿಕೇಶ ಕುಲಕರ್ಣಿ, ಸ0ಗುಗೌಡ ಮಾಪಾ, ಶಿವಲಿಂಗಪ್ಪ ಪಿಡ್ಡೆಗೌಡ, ಗುರುನಾಥ ನಾಟೇಕರ್, ಶಿವರಾಜ ಸಾಹು ಬಾಗೂರ, ನಿಂಗಣ್ಣ ಜಡಿ, ಬನ್ನಪಗೌಡ ಚಿನ್ನಮನೋರ, ಮಲ್ಲಣ್ಣ ನೀಲಹಳಿ, ಸ0ತೋಷ ಬೊಜಿ, ದೇವಪ ಕಡೇಚೂರು, ಜಲಾಲ ಕೋನಳಿ, ಇನ್ನಿತರರು ಹಾಜರಿದ್ದರು