ಕೊರೋನಾ ಸೇನಾನಿಗಳಿಗೆ ಗೌರವ

ಬೆಂಗಳೂರು, ಮಾ.೩೦- ಕೋವಿಡ್-೧೯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಗ್ಯಸೇವಾ ಕ್ಷೇತ್ರದ ಕಾರ್ಯಕರ್ತರು ಮತ್ತು ಕೊರೋನಾ ಸೇನಾನಿಗಳನ್ನು ನಗರದಲ್ಲಿ ಗೌರವಿಸಲಾಗಿದೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬೆಂಗಳೂರು ಘಟಕದ ಸಹಯೋಗದಲ್ಲಿ ವೈದ್ಯಕೀಯ ವೃತ್ತಿಪರರ ವೈಯಕ್ತಿಕ ಅರ್ಜಿಗಳನ್ನು ಪರಿಶೀಲಿಸಿ ಐಎಂಎ ನೇತೃತ್ವದ ಸಮಿತಿ ಅಮೂಲ್ಯ ಸೇವೆ ಸಲ್ಲಿಸಿದ ೩೫ ಕೋವಿಡ್ ಯೋಧರನ್ನು ಸನ್ಮಾನಿಸಲಾಯಿತು.

ಈ ಪ್ರಶಸ್ತಿ ನಗದು ಪ್ರಶಸ್ತಿ, ಪ್ರಮಾಣಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. “ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೋವಿಡ್ ವಾರಿಯರಸ್ ಸೇವೆ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಮುಂಚೂಣಿ ಕಾರ್ಯಕರ್ತರು ನಿಜ ಹೀರೊಗಳಾಗಿದ್ದು, ಅವರನ್ನು ಗೌರವಿಸುವುದು ನಮಗೆ ಅತೀವ ಹೆಮ್ಮೆ ಎನಿಸುತ್ತಿದೆ. ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರ ಸಮರ್ಪಣೆ ಮತ್ತು ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ” ಎಂದು ಮುತ್ತೂಟ್ ಫೈನಾನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಜಾರ್ಜ್ ಮುತ್ತೂಟ್ ಅಲೆಕ್ಸಾಂಡ ಹೇಳಿದ್ದಾರೆ.
ಆರೋಗ್ಯ ಕ್ಷೇತ್ರದ ಕಾರ್ಯಕರ್ತರನ್ನು ನಮ್ಮ ವಿಶೇಷ ಅತಿಥಿಗಳಾಗಿದ್ದ ಬೆಂಗಳೂರು ಐಎಂಎ ಅಧ್ಯಕ್ಷ, ಡಾ.ವಿನಯ್ ಎಚ್.ಎನ್, ಬೆಂಗಳೂರು ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ಆರ್.ಜ್ಯೋತಿ, ಬೆಂಗಳೂರು ಐಎಂಎ ಗೌರವ ಕಾರ್ಯದರ್ಶಿ ಡಾ.ಪ್ರದೀಪ್ ಕೆ.ಎನ್, ಬೆಂಗಳೂರು ಐಎಂಎ ಪಿಆರ್‌ಓ ಡಾ.ಎಸ್.ಶ್ರೀನಿವಾಸ್, ಮುತ್ತೂಟ್ ಫೈನಾನ್ಸ್ನ ಉನ್ನತ ಅಧಿಕಾರಿಗಳಾದ ಮುತ್ತೂಟ್ ಫೈನಾನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಜಾರ್ಜ್ ಮುತ್ತೂಟ್ ಅಲೆಗ್ಸಾಂಡರ್, ಮುತ್ತೂಟ್ ಫೈನಾನ್ಸ್ ಬೆಂಗಳೂರಿನ ಆಡಳಿತ ವಿಭಾಗದ ವ್ಯವಸ್ಥಾಪಕ ಜೆ.ಎಸ್.ಹಿರೇಮಠ್, ಮುತ್ತೂಟ್ ಫೈನಾನ್ಸ್ ಬೆಂಗಳೂರು ವಿಭಾಗೀಯ ಮುಖ್ಯಸ್ಥ ಅರುಣ್ ಪವಿತ್ರನ್ ಅವರು ಪ್ರಶಸ್ತಿ ವಿತರಿಸಿದರು.