ಕೊರೋನಾ ಸರಪಳಿ ತುಂಡರಿಸಿ

ಚಿತ್ರದುರ್ಗ. ಮೇ.೨೦: ವಿಶ್ವಾದಾದ್ಯಂತ ಹರಡುತ್ತಿರುವ ಕೊರೋನಾ ವೈರಸ್‌ನ ಸರಪಳಿಯನ್ನು ತುಂಡರಿಸುವವರೆಗೂ ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಾಗದು. ಕರೋನ ನಮ್ಮ ಬದುಕುವ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ, ಈ ಭಯಾನಕ ವೈರಸ್‌ನ ಹರಡುವಿಕೆಯ ಮಾರ್ಗಗಳನ್ನು ಕಂಡು ಹಿಡಿದು, ಅವುಗಳನ್ನು ತಡೆಯುವುದರ ಬಗ್ಗೆ ನಾವು ಗಮನಹರಿಸಬೇಕು. ಅದರ ಜೀವನ ಚಕ್ರದ ಸರಪಳಿಯನ್ನ ತುಂಡರಿಸಲು ಪ್ರಯತ್ನಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ ಮತ್ತು ಜಿಲ್ಲಾ ಸಂಚಾರಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ “ಕರೋನಾ ಸರಪಳಿ ತುಂಡರಿಸಿ” ಎಂಬ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೊರೋನ ದಿನ ಬಿಟ್ಟು ದಿನ ಜನರ ಜೀವನವನ್ನೇ ನಾಶ ಮಾಡುತ್ತಿದ್ದು, ನಮ್ಮನ್ನ ಅವಿರತವಾಗಿ ಸೋಲಿಸುತ್ತಿದೆ. ನಾವು ಎಷ್ಟೇ ಮುತುವರ್ಜಿ ವಹಿಸಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್‌ಗಳನ್ನು ಬಳಸಿ, ಮನೆಯಲ್ಲೇ ಇದ್ದು, ಗುಂಪು ಸೇರದೆ, ನಮ್ಮ ನಡವಳಿಕೆಗಳನ್ನು ತಿದ್ದಿಕೊಂಡರು ಸಹ ಅದು ನಮ್ಮನ್ನ ಸುತ್ತುವರಿಯುತ್ತಲೆ ಇದೇ. ವೈದ್ಯಕೀಯ ಲೋಕಕ್ಕೆ ವಿಸ್ಮಯಕಾರಿಯಾಗಿ ನಿಂತಿದೆ. ಈ ವೈರಸ್‌ನ್ನು ನಾವು ಲಸಿಕೆಗಳ ಮೂಲಕವೂ ಸಹ ಕಟ್ಟಿ ಹಾಕಬಹುದು, ಆದರೆ ವಿಶ್ವಾದಾದ್ಯಂತ ಲಸಿಕೆಗಳನ್ನು ನೀಡಲು ಇನ್ನೂ 2 ರಿಂದ 3 ವರ್ಷಗಳಷ್ಟು ಸಮಯ ಬೇಕಾಗುತ್ತದೆ. ಲಸಿಕೆ ಉತ್ಪಾದನೆ ಕಡಿಮೆ ಮಟ್ಟದಲ್ಲಿರುವುದರಿಂದ ನಮಗೆ ಉಳಿದಿರುವುದು ಅದರ ಹರಡುವಿಕೆಯನ್ನ ತಡೆಯುವಂಥದ್ದೇ ಆಗಿದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನ ಪಡೆಯುವವರೆಗೂ ನಾವು ಎಚ್ಚರಿಕೆಯಿಂದ ಮುನ್ನಡೆಯಬೇಕಾಗಿದೆ ಎಂದರು.
ಸಾಕಷ್ಟು ಜನ ಜಾಗೃತಿ ಕಾರ್ಯಕ್ರಮಗಳು ನೆಡೆಸಿದರು ಸಹ ನಮ್ಮ ನೆಡೆವಳಿಕೆಗಳು ಇನ್ನೂ ಕೆಟ್ಟದ್ದಾಗಿಯೇ ಇವೆ. ಜನರು ರಸ್ತೆ ಮೇಲೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಓಡಾಡುತ್ತಿರುವುದರಿಂದ ಲಾಕ್ ಡೌನ್ ವಿಸ್ತರಣೆಯಾಗುತ್ತಾ ಹೋಗುತ್ತಿದೆÉ. ನಾವು ಕಡಿಮೆ ಸಮಯದಲ್ಲೇ ಈ ವೈರಸ್ಸನ್ನು ನಿಯಂತ್ರಣದಲ್ಲಿಡಬಹುದಿತ್ತು. ರೋಗಿಯು ಕೆಮ್ಮಿದಾಗ, ಸೀನಿದಾಗ ಬರುವ ದ್ರವದಲ್ಲಿ ಇದು ಅಡಗಿ ಕುಳಿತಿರುತ್ತದೆ. ಹಾಗಾಗಿ ನಾವು ಎಚ್ಚರವಾಗಿರಬೇಕು. ಪೊಲೀಸ್ ಇಲಾಖೆ, ವೈದ್ಯಕೀಯ ಸಿಬ್ಬಂದಿ ವರ್ಗ ಅವಿರತವಾದ ಶ್ರಮದಿಂದ ಈ ವೈರಸನ್ನು ಕಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರೆ, ಅವರಿಗೆ ನಮ್ಮ ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಕರೋನ ವೈರಸ್ಸಿನ ಮಾದರಿಗಳನ್ನ ಮಾಡಿ, ಅವುಗಳನ್ನ ಸರಪಳಿ ಆಕಾರದಲ್ಲಿ ಕಟ್ಟಿ ರಸ್ತೆ ಬದಿಯಲ್ಲಿ ಪ್ರದರ್ಶನಕ್ಕಿಟ್ಟು ಸರಪಳಿ ತುಂಡರಿಸಿ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗರಾಜ್, ರಘು.ಟಿ. ಮಹಿಳಾ ಪಿಎಸ್‌ಐ ಶ್ರೀಮತಿ ರುಕ್ಕಮ್ಮ, ಕೋಟೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್, ಕೆಂಚಪ್ಪ, ಎಐಸಿ ಮಂಜುನಾಥ್, ಪ್ರಸನ್ನ ಕುಮಾರ್, ಶಿವಣ್ಣ ಟಿ, ಎಎಸ್‌ಐ, ನರೇಂದ್ರ ಬಾಬು, ಶಿವರಾಮ್, ಹೆಡ್ ಕಾನ್ಸ್ಟೆಬಲ್ ಪರುಷುರಾಮ್, ಪಿಸಿ ಪ್ರಸನ್ನಕುಮಾರ್ ಮತ್ತು ಸಂಚಾರಿ ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.