ಕೊರೋನಾ ಸಂಕಷ್ಟ ಮರೆಯುವಂತೆ ಮಾಡಿದ ಹೊಸವರ್ಷದ ಸಂಭ್ರಮಾಚಾರಣೆ

ಬಳ್ಳಾರಿ, ಡಿ.31: ಕರೋನಾ ಸಂಕಷ್ಟವನ್ನು ಮರೆತು ನಗರದಲ್ಲಿ 2021 ನೆ ವರ್ಷದ ಸ್ವಾಗತಕ್ಕೆ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದಾರೆ.
ನಮ್ಮದು ಹಿಂದು ಸಂಸ್ಕೃತಿಯಾದರೂ ಜನ‌ಮಾತ್ರ ಪಾಶ್ಚಿಮಾತ್ಯದ ಆಚರಣೆಗೆ ಮುಗಿ ಬೀಳುತ್ತಾರೆ. ಬೇಕರಿ ಮಾಲೀಕರು ಪ್ರತಿ ವರ್ಷದಂತೆ ಬಗೆ ಬಗೆಯ ಸ್ವಾದ, ರೂಪ, ವರ್ಣದ ಕೇಕ್ ಗಳನ್ನು ಸಿದ್ದ ಮಾಡಿಕೊಂಡಿದ್ದಾರೆ.
ಕೇಕ್ ಗಳನ್ನು ಸಿದ್ದಮಾಡಿಕೊಂಡಿದೆ ಕೆಲವರು ಮೊದಲೇ ಆರ್ಡರ್ ಮಾಡಿದ್ದಾರೆ. ಕೆಲವರು ಕೊನೆ ಗಳಿಗೆ ವರೆಗೆ ಬಂದು‌ಖರೀದಿ ಮಾಡುತ್ತಾರೆ. ಈ ಬಾರಿ ಕರೋನ ಇರುವುದರಿಂದ ಅಲ್ಲದೆ ಮಧ್ಯರಾತ್ರಿ ವರಗೆ ಆಚರಣೆಗೆ ಪೊಲೀಸ್, ಜಿಲ್ಲಾಡಳುತ ಹಲವು ಕಟ್ಟುಪಾಡುಗಳನ್ನು ವಿಧಿಸಿರುವುದರಿಂದ
ನಿರೀಕ್ಷಿತ ವ್ಯಾಪಾರ ಆಗೋ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ನಗರದ ರೆಣುಕಾ ಬೇಕರಿ ಮಾಲೀಕ ಹರೀಶ್ ಶೆಟ್ಡಿ ಅವರು, ಆದರೂ ಅವರ ಅಂಗಡಿ‌ ಮುಂದೆ ಹೊಸ ವರ್ಷ ಸ್ವಾಗತಕ್ಕೆ ಕೇಕ್ ಖರೀದಿಗೆ ಜನರು ಮುಗಿಬಿದ್ದದ್ದ ದೃಶ್ಯ ಕಂಡು‌ಬಂತು. ಕೇಕ್, ಪಟಾಕಿ, ಶಾಟ್ಸ್ , ಬಲೂನ್ ಸೇರಿದಂತೆ ಇನ್ನಿತರ ವಸ್ತು ಖರೀದಿ ಮಾಡಲು ಮಾರುಕಟ್ಟೆಗೆ ಜನ ಬಂದಿದ್ದರು.
ಹೊರಗೆ ಬಹಿರಂಗವಾಗಿ ಪ್ರತಿ ವರ್ಷದಂತೆ ಗುಂಪಾಗಿ ಸಂಭ್ರಮಾಚರಣೆಗೆ ಇಲ್ಲದ ಕಾರಣ ಮನೆಯಲ್ಲಿ, ಅಪಾರ್ಟ್ ಮೆಂಟ್ ಗಳಲ್ಲಿ ಹೊಸ ವರ್ಷಾಚರಣೆ ಮಾಡಲು ಜನರು ರೆಡಿಯಾಗಿದ್ದಾರೆ.