ಕೊರೋನಾ ವೈರಸ್:ಸ್ಯಾನಿಟೈಸರ್ ಸಿಂಪರಣೆ

ಗಬ್ಬೂರು.ಏ.೦೨-ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಶರಣಪ್ಪ ಹಾಗೂ ಅಧ್ಯಕ್ಷ- ಉಪಾಧ್ಯಕ್ಷ ಸರ್ವ ಸದಸ್ಯರ ನೇತ್ರತ್ವದಲ್ಲಿ ಕೊರೋನಾ ವೈರಾಣು ನಿಯಂತ್ರಣಕ್ಕೆ ಸ್ಥಳೀಯ ರಸ್ತೆ, ಪ್ರಯಾಣಿಕರ ತಂಗುದಾಣ, ಅಂಗಡಿ ಮುಂಗಟ್ಟುಗಳ ಮುಂಭಾಗಕ್ಕೆ ಸ್ಯಾನಿಟೈಸ್ ಮಾಡಲಾಯಿತು.
ಕೊರೋನಾ ವೈರಸ್ ಎರಡನೇ ಅಲೆ ಹೆಚ್ಚಿತ್ತಿರುವ ಸಂದರ್ಭದಲ್ಲಿ ಜನನಿಬಿಡ ಪ್ರದೇಶಗಳನ್ನು ಟ್ಯಾಕ್ಟರ್ ಯಂತ್ರದ ಸಹಾಯದಿಂದ ಸ್ಯಾನಿಟೈಸರ್ ಮಾಡಲಾಯಿತು. ಗುರುವಾರ ಪೂರ್ವಾಹ್ನ ೧೦ಘಂಟೆಗೆಯ ಬಳಿಕ ಈ ಕಾರ್ಯಕ್ಕಿಳಿದರು ಅಂಗಡಿ ಮುಂಗಟ್ಟಿಗಳು ಮುಚ್ಚಿದ್ದು, ಜನಸಂಚಾರ ಇಲ್ಲದ ಕಾರಣ ಪರಿಣಾಮಕಾರಿಯಾಗಿ ಸ್ಯಾನಿಟೈಸರ್ ಸಿಂಪರಣೆ ಮಾಡಲಾಯಿತು.