ಕೊರೋನಾ ವಿರುದ್ದ ಲಸಿಕೆ ದೊಡ್ಡ ಅಸ್ತ್ರ : ಡಾ.ಕೆ ಸುಧಾಕರ್

ಬೆಂಗಳೂರು,ಏ.21- ಕೊರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ಲಸಿಕೆ ನಮಗಿರುವ ಅತ್ಯಂತ ದೊಡ್ಡ ಅಸ್ತ್ರವಾಗಿದೆ‌ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಅರ್ಹ‌‌ ಎಲ್ಲಾ ವ್ಯಕ್ತಿಗಳೂ ಕೂಡಲೇ ಲಸಿಕೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು ದೇಶದಲ್ಲಿ ಈವರೆಗೂ ಸುಮಾರು 12.7 ಕೋಟಿ ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದ್ದು, ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದ ಶೇ.99.96 ರಷ್ಟು ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿಲ್ಲ ಎಂದಿದ್ದಾರೆ.

11.6 ಕೋಟಿ ಕೋವಿಶೀಲ್ಡ್:

ಒಟ್ಟಾರೆ ಲಸಿಕೆ ಪಡೆದ ಮಂದಿಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು 11.6 ಕೋಟಿ ಮಂದಿ ಲಸಿಕೆಯ ಡೋಸ್ ‌ಪಡೆದಿದ್ದಾರೆ.

10,03,02 ,745 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.ಅದರಲ್ಲಿ 17,145 ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಮೊದಲ‌ಡೋಸ್ ಲಸಿಕೆಯ ನಂತರ ಸೋಂಕು ಕಾಣಿಸಿಕೊಂಡ ಪ್ರಮಾಣ ಶೇ. 0.02 ರಷ್ಟು ಇದೆ.

ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು 1,57,32,754 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇವರಲ್ಲಿ 5014 ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ.‌ಅಂದರೆ ಶೇ‌; 0.03ರಷ್ಟು ಮಾತ್ರ ಎಂದಿದ್ದಾರೆ.

1.1 ಕೋಟಿ ಕೋವಾಕ್ಸಿನ್ ;

ಕೋವಾಕ್ಸಿನ‌್ ಲಸಿಕೆಯನ್ನು 1.1 ಕೋಟಿ ಪಡೆದಿದ್ದಾರೆ ಅದರಲ್ಲಿ 93,56,436 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.ಇವರಲ್ಲಿ 4208 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅಂದರೆ ಶೇ . 0.04 ರಷ್ಟು ಇದೆ.

17,27,178 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದು ಅದರಲ್ಲಿ 695 ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ.ಅಂದರೆ ಲಸಿಕೆ ಪಡೆದವರಲ್ಲಿ ಪ್ರತಿಶತ 0.04 ರಷ್ಟು ಮಾತ್ರ ಇದೆ.

ಈಗಾಗಿ ಜನರು ಕೋವಿಡ್ ಲಸಿಕೆಯನ್ನು ಪಡೆಯುವ ಮೂಲಕ ಸೋಂಕು ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಎಂದು ಹೇಳಿದ್ದಾರೆ.