ಕೊರೋನಾ ವಾರಿಯರ್ಸ್‍ಗಳ ಪಾಲಿಗೆ ಆಪತ್ಬಾಂಧವರಾದ ಶಾಸಕ ದೇವಾನಂದ ಚವ್ಹಾಣ

ವಿಜಯಪುರ, ಮೇ.29-ಜಿಲ್ಲೆಯ ಹಳ್ಳಿ ಹಳ್ಳಿಗೂ ಮಹಾಮಾರಿ ಕೊರೋನಾ ಹರಡಿದೆ. ಇದನ್ನ ನಿಯಂತ್ರಣಕ್ಕೆ ತರಲು ತಮ್ಮ ಜೀವದ ಹಂಗು ತೊರೆದು ಕೊರೋನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ. ಈ ವಾರಿಯರ್ಸಗಳಿಗೆ ಧೈರ್ಯ ತುಂಬಿ ಹುರಿದುಂಬಿಸುತ್ತಿದ್ದಾರೆ ನಾಗಠಾಣ ಶಾಸಕ ದೇವಾನಂದ ಫೂ ಚವ್ಹಾಣ.
ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು,ಅಂಗನ ವಾಡಿ ಕಾರ್ಯೆಕರ್ತೆಯರು, ಆರೋಗ್ಯ ಸಹಾಯಕಿಯರು ಹಾಗೂ ಗ್ರಾಮ ಮಟ್ಟದ ಕಾರ್ಯಪಡೆಯ ವಿವಿಧ ಸದಸ್ಯರಿಗೆ ಶಾಸಕ ದೇವಾನಂದ ಚವ್ಹಾಣ ಆಹಾರ ಧಾನ್ಯ ಮತ್ತು ವೈದ್ಯಕೀಯ ಕಿಟ್ ವಿತರಿಸಿದರು.ನಾಗಠಾಣ ಮತಕ್ಷೇತ್ರದ ಇಂಚಗೇರಿ, ಜಿಗಜಿಣಗಿ, ದೇವರ ನಿಂಬರಗಿ, ಬರಡೋಲ, ನಂದರಗಿ ಗ್ರಾಮಗಳಲ್ಲಿ ವಿತರಣಾ ಕಾರ್ಯ ನಡೆಯಿತು.
ಇದೆ ವೇಳೆ ಮಾತನಾಡಿದ ಶಾಸಕ ದೇವಾನಂದ ಚವ್ಹಾಣ ಕೊರೋನಾ ಎರಡನೇ ಅಲೆಯಂತಹ ಕ್ಲಿಸ್ಟಕರ ಸಮಯದಲ್ಲಿ ಕೊರೊನಾ ವಾರಿಯರ್ಸ್‍ಗಳು ಜೀವದ ಹಂಗು ತೊರೆದು,ತಮ್ಮ ಕುಂಬುವನ್ನು ದೂರವಿಟ್ಟು ಹಗಲು ರಾತ್ರಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಗಳ ಕಾರ್ಯ ಶ್ಲಾಘನೀಯ ಮತ್ತು ಸ್ಮರಣನೀಯ ವಾಗಿದೆ. ಅವರಿಗೆ ಎಲ್ಲರು ಸಹಾಯ ಹಾಗೂ ಸಹಾಕರ ನೀಡಬೇಕು.ಇದರಿಂದ ಅವರಿಗೂ ಇನ್ನು ಹೆಚ್ಚು ಕೆಲಸ ಮಾಡುವ ಹುಮ್ಮಸ್ಸು ಬರುತ್ತೆ.ಇದರಿಂದ ಹಳ್ಳಿಗಳಿಂದ ಕೊರೊನಾ ಹೊಡೆದೋಡಿ ಸಲು ಸಹಕಾರಿ ಆಗಲಿದೆ ಎಂದರು.
ಈ ಬಾರಿಯ ಕೊರೋನಾ ನಿಯಂತ್ರಣ ಬಹುದೊಡ್ಡ ಸವಾಲಾಗಿದೆ. ಆದ್ದರಿಂದ ಕೊರೋನಾ ವಾರಿಯರ್ಸ್‍ಗಳ ಸಲಹೆ ಸೂಚನೆಗಳನ್ನ ತಪ್ಪದೆ ಪಾಲಿಸಿ ಕೊರೋನಾ ಮುಕ್ತ ಗ್ರಾಮಗಳ್ಳನ್ನಾಗಿಸಬೇಕೆಂದು ಜನರಲ್ಲಿ ಮನವಿ ಮಾಡಿದರು. ನಾನು ಕೂಡ ಜೀವದ ಹಂಗು ತೊರೆದು ಮತಕ್ಷೇತ್ರದ ಉದ್ದಕ್ಕು ಸುತ್ತುತ್ತಿದ್ದೇನೆ. ನಮ್ಮೆಲ್ಲರ ಪರಿಶ್ರಮಕ್ಕೆ ಫಲ ಸಿಗಬೇಕೆಂದ್ರೆ ನೀವುಗಳೆಲ್ಲ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲೆ ಇರಬೇಕು. ಸರಕಾರ ಕೋವಿಡ್ ನಿಯಮಗಳನ್ನ ಚಾಚು ತಪ್ಪದೆ ಪಾಲಿಸಬೇಕೆಂದು ಜನರಲ್ಲಿ ಮನವಿ ಮಾಡಿದರು.
ನಾನು ಪ್ರತಿನಿತ್ಯ ಮತಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೆ ಓಡಾಡುತ್ತಿದ್ದೇನೆ.ನನ್ನ ಕೈಲಾದಷ್ಟು ಸಹಾಯ, ಸಹಕಾರ ನೀಡುತ್ತಿದ್ದೇನೆ. ಅಲ್ಲದೆ ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ.ಕೊರೋನಾ ವಾರಿಯರ್ಸ್ ಗಳ ಜೊತೆ ಒಳಗೂಡಿ ನಾನು ಕೊರೋನಾ ಹರಡದಂತೆ ತಡೆಯಲು ಹೋರಾಟ ಮಾಡುತ್ತೆನೆ. ಇದಕ್ಕೆ ಮತಕ್ಷೇತ್ರೆ ಜನರು ಸಾಥ್ ನೀಡಿಬೇಕು ಎಂದು ವಿನಂತಿ ಮಾಡಿದರು.
ಇದೆ ವೇಳೆ ತಹಶೀಲ್ದಾರ ಸುರೇಶ ತವಲರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜಯ ಕಡಗಕರ, ಅಧ್ಯಕ್ಷರಾದ ಚಾಂದಬೇಬಿ ಬಡೆಗಾರ, ಬಾಪುರಾಯಗೌಡಾ ಬಿರಾದಾರ, ಸಿಡಿಪಿಓ ಅನೀಲ ಹಳ್ಳಿ, ಎಎಸ್ ಐ ವಾಘಮೋರೆ, ಅಭಿವೃದ್ಧಿ ಅಧಿಕಾರಿಯಾದ ಬಾಬು ಉಮದಿ, ಆರೋಗ್ಯ ಅಧಿಕಾರಿಗಳಾದ ಅರ್ಚಾನಾ ಕುಲಕರ್ಣಿ, ಹಿರಿಯರಾದ ಜೆ ಎಂ ಚೌಧರಿ ಕಾಕರವರು, ಹಿರಿಯರಾದ ಬಾಬುರಾಯ ಬಿರಾದಾರ, ಗಜಾನನ ಪವಾರ, ಹಸನಸಾಬ ಬಾಗವಾನ, ವೆಂಕಟೇಶ, ದನಸಿಂಗ್, ಶೀವರಾಯಗೌಡಾ ಬಿರಾದಾರ, ಮಹೇಶ ಕುಲಕರ್ಣಿ, ಮುಬಾರಕ್ ಕೊಂಕಣಿ, ಮುದಕಪ್ಪಾ ತಳವಾರ, ಪರಶುರಾಮ ಕಟ್ಟಿಮನಿ, ಕಂದಾಯ ನಿರೀಕ್ಷಕರಾದ ಪಿ.ಡಿ ಕೋಡವನ್ನ, ತಲಾಟಿ ಎಸ್ಬಿ ಬಿರಾದಾರ, ವೈದ್ಯಾಧಿಕಾರಿಗಳಾದ ಡಾ ಜಾನ್ ಕಡವತ್,ಮಹಾದೇವ ಜೀರಂಕಲಿಗಿ ಉಪಸ್ಥಿತರಿದ್ದರು.