ಕೊರೋನಾ ವಾರಿಯರ್ಸ್ಗೆ ವಿಶೇಷ ಔತಣ ಕೂಟ

ಚಿತ್ರದುರ್ಗ ಜೂ.೧೦; ಕೋವಿಡ್ 19ರ ಈ ತುರ್ತು ಪರಿಸ್ಥಿತಿಯಲ್ಲಿ ಸುಮಾರು ಒಂದುವರೆ ತಿಂಗಳಿನಿಂದ ಅತೀ ಕಡು ಬಡವರು, ವಿಧವೆಯರು, ಅಬಲೆಯರು, ಅಲೆಮಾರಿಗಳು, ಭಿಕ್ಷಕರುಗಳು ಈ ರೀತಿಯ ಹಲವು ನಿರ್ಗತಿಕರುಗಳಿಗೆ ಅನ್ನದಾನ ಮಾಡುತ್ತಾ ಬಂದಿರುವ ಹೆಚ್.ಹೆಚ್. ಮಂಜುನಾಥ್ ರವರು ಜೂ.13 ರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಇಲಾಖೆಯ ಕರೋನಾ ವಾರಿಯರ್ಸ್ ಎಲ್ಲಾ ಸಿಬ್ಬಂದಿ ವರ್ಗದವರಿಗೆ  ಬಾಡೂಟವನ್ನು ಅವರು ಇರುವ ಜಾಗಕ್ಕೆ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷರಾದ ಹಾಗೂ ಕಲಾವಿದರಾದ ಹೆಚ್. ಪ್ಯಾರೇಜಾನ್, ಕಣಿವೆ ಮಾರಮ್ಮ ಸಂಘಟನೆಯ ಅಧ್ಯಕ್ಷರಾದ ಎನ್. ತಿಪ್ಪೇಸ್ವಾಮಿ, ಬಡಗಿ ಸಂಘದ ರಾಜ್ಯಾದ್ಯಕ್ಷರು ಜಾಕೀರ್ ಹುಸೇನ್, ಮುಸ್ಲಿಂ ಕಲ್ಚರಲ್ ಅಕಾಡೆಮಿ ಅದ್ಯಕ್ಷರಾ ಎಂ.ಹನೀಫ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಮಹಂತೇಶ್ ಹಾಗೂ ಇತರೆ ಸಂಘಟನೆಯ ಮುಖಂಡರು ಸೇರಿ ಈ ಕಾರ್ಯಕ್ರಮವನ್ನು ನೆರವೇರಿಸುವರು. Attachments area