ಕೊರೋನಾ ಲಸಿಕೆ: ಮೈಸಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಡುವುದು ಸವಾಲು:ಏಮ್ಸ್

ನವದೆಹಲಿ. ನ.11- ಅಮೆರಿಕದ ದೈತ್ಯ ಔಷಧ ತಯಾರಿಕಾ ಸಂಸ್ಥೆ ಕೋರೋನಾ ಸೋಂಕಿಗೆ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಡುವುದು ಸವಾಲಿನ ಕೆಲಸ ಎಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ -ಏಮ್ಸ್ ಹೇಳಿದೆ.

ಫಿಫಿಜರ್ ಸಂಸ್ಥೆ ‌ ಲಸಿಕೆಯನ್ನು -70 ಡಿಗ್ರಿ ಸೆಲ್ಸಿಯಸ್ ನಲ್ಲಿ ಇರುವುದು ಕಷ್ಟದ ಮತ್ತು ಸವಾಲಿನ ಕೆಲಸ ಇಂದು ವೈದ್ಯಕೀಯ ನಿರ್ದೇಶಕ ರಣ್ ದೀಪ್ ಗುಲೇರಿಯಾ ಹೇಳಿದ್ದಾರೆ.

ಭಾರತದಂತಹ ದೇಶದಲ್ಲಿ -70 ರಲ್ಲಿ ಲಸಿಕೆಯನ್ನು ಸಂಸ್ಕರಣೆ ಮಾಡುವುದು ಸವಾಲಿನ ಕೆಲಸ ಆದರೂ ಅನಿವಾರ್ಯವಾಗಿ ಅಂತಹ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಲಸಿಕೆ ಅಂತಿಮ ಹಂತದಲ್ಲಿ ಇರುವುದನ್ನು ಪ್ರಕಟಿಸಿರುವುದು ಒಳ್ಳೆಯ ಬೆಳವಣಿಗೆ ಮತ್ತು ಒಮ್ಮೆ ಲಸಿಕೆ ಸಿದ್ಧವಾದ ಬಳಿಕ ಅದನ್ನು ಶೇಖರಣೆ ಮಾಡುವುದು ಸದ್ಯಕ್ಕಿರುವ ಸವಾಲು ಎಂದು ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಫಿಫಿಜರ್ ಕೊರೋನಾ ಸೋಂಕಿಗೆ ಕಂಡುಹಿಡಿದಿರುವ ಲಸಿಕೆ ಶೇಕಡ 90ರಷ್ಟು ಯಶಸ್ವಿಯಾಗಿದೆ ಎಂದು ಪ್ರಕಟಿಸಿತ್ತು.

1.3 ಶತಕೋಟಿ ಡೋಸ್ ಸರಬರಾಜು:

ಲಸಿಕೆ ಒಮ್ಮೆ ಸಿದ್ಧವಾಗುತ್ತಿದ್ದಂತೆ ನನ್ನ ಪೂರೈಕೆ ಮಾಡುವುದು ಸವಾಲಿನ ಕೆಲಸವಾಗಿದೆ ಹೀಗಾಗಿ ಶೇಖರಣೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಗುಲೇರಿಯಾ ತಿಳಿಸಿದ್ದಾರೆ.

2021ರಲ್ಲಿ 1.3 ಶತಕೋಟಿ ಲಸಿಕೆಯನ್ನು ಪೂರೈಕೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಸಂಸ್ಥೆ ಹೇಳಿದೆ.ಮುಂದಿನ ವರ್ಷದ ಅಂತ್ಯದ ವೇಳೆಗೆ ಶೇಕಡ 50 ರಷ್ಟು ವಿಶ್ವದ ಜನಸಂಖ್ಯೆಗೆ ಲಸಿಕೆ ಪೂರೈಕೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.

ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಗುಲೇರಿಯಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.