ಕೊರೋನಾ ಲಸಿಕೆ ಪಡೆದ ಪೂಜ್ಯ ಗಂಗಾಧರ ಶಿವಾಚಾರ್ಯರು

ಬೀದರ್. ಮಾ 22: ಬೀದರ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಷ.ಬ್ರ.ಗಂಗಾಧರ ಶಿವಾಚಾರ್ಯ ಅವರು ಬೀದರ ನಗರದ ಅಮೂಲ್ಯ ಆಸ್ಪತ್ರೆಯಲ್ಲಿ ಮಾರ್ಚ 20 ರಂದು ಜಿಲಾ ಶಸ್ತ್ರ ಚಿಕಿತ್ಸಕರಾದ ಡಾ.ರತಿಕಾಂತ ಸ್ವಾಮಿಯವರಿಂದ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರು.
ಲಸಿಕೆ ಪಡೆದ ಬಳಿಕ ಶ್ರೀಗಳು ಮಾತನಾಡಿ, ಬೀದರ ಜಿಲ್ಲೆಯಲ್ಲಿ ಕೋವಿಡ್-19 ಕೇಸುಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ವೈದ್ಯರ ಸಲಹೆಯಂತೆ ಕೋವಿಶೀಲ್ಡ್ ಲಸಿಕೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.