ಕೊರೋನಾ ಲಸಿಕೆ ಉತ್ಪಾದಕ ಸಂಸ್ಥೆಗಳೊಂದಿಗೆ ಆರೋಗ್ಯ ಸಚಿವಾಲಯ ಚರ್ಚೆ

ನವದೆಹಲಿ, ನ.10- ಅಮೆರಿಕ ಮೂಲದ ಬೃಹತ್ ಔಷಧ ತಯಾರಿಕಾ ಸಂಸ್ಥೆ ಫಿಪಿಜರ್ ಕರೋನಾ ಸೋಂಕಿನ ಮೂರನೇ ಹಂತದ ಪ್ರಯೋಗ ಶೇಕಡ 90ರಷ್ಟು ಯಶಸ್ವಿಯಾಗಿದೆ ಎಂದು ಪ್ರಕಟಿಸುತ್ತಿದ್ದಂತೆ ಕೇಂದ್ರ ಸರ್ಕಾರ ಎಲ್ಲಾ ಲಸಿಕ ತಯಾರಿಕಾ ಸಂಸ್ಥೆಗಳೊಂದಿಗೆ ಮುಂದಿನ ಕಾರ್ಯಯೋಜನೆ ಬಗ್ಗೆ ಸುದೀರ್ಘ ಸಭೆ ನಡೆಸಲು ಮುಂದಾಗಿದೆ.

ದೇಶೀಯ ಮತ್ತು ವಿದೇಶಿಯ ಲಸಿಕೆ ತಯಾರಿಕಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಭೂಷಣ್ ತಿಳಿಸಿದ್ದಾರೆ.

ಫಿಫಿಜರ್ ಸಂಸ್ಥೆ ತಾನು ಅಭಿವೃದ್ಧಿಪಡಿಸಿರುವ ಕೊರೋನೋ ಸೋಂಕಿನ ಲಸಿಕೆ ಶೇಕಡ 90ರಷ್ಟು ಯಶಸ್ವಿಯಾಗಿದೆ ಮಾಹಿತಿಯನ್ನು ಅವರ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಲಸಿಕೆಯನ್ನು ಆರಂಭದಲ್ಲಿ ಪಡೆಯಲು ಮುಂದಾಗಿದೆ.

ಅಮೇರಿಕಾದ ಅತಿ ದೊಡ್ಡ ಔಷಧ ತಯಾರಿಕಾ ಸಂಸ್ಥೆ ಫೀಫಿಜರ್, ಸಂಸ್ಥೆಯ ಜೊತೆಯು ಮಾತುಕತೆ ನಡೆಸಲಾಗಿದೆ ಎಂದು ಅಶೋಕ್ ತಿಳಿಸುತ್ತಾರೆ.

ಫಿಫಿಜರ್ ಸಂಸ್ಥೆ ಬಯೋನ್ ಟೆಕ್ ಎಸ್ ಇ ಸೇರಿದಂತೆ ವಿವಿಧ ಸಂಸ್ಥೆಗಳ ಜೊತೆಗೂಡಿ ಲಸಿಕೆ ಅಭಿವೃದ್ಧಿ ಪಡಿಸಿದೆ ಅದರ ಮೂರನೇ ಹಂತದ ಪ್ರಯೋಗ ಇದೀಗ ಅಂತಿಮ ಹಂತಕ್ಕೆ ಬಂದಿದೆ.

12 ಕೋಟಿ ದಾಟಿದ ಪರೀಕ್ಷೆ:

ಇದುವರೆಗೆ ಕೊರೋನಾ ಸೋಂಕಿನ ಮಾದರಿ ಪರೀಕ್ಷೆಯನ್ನು 12 ಕೋಟಿಗೂ ಅಧಿಕ ಮಂದಿಗೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕಳೆದ ಒಂದು‌ವಾರದಲ್ಲಿ 11 ಲಕ್ಷಕ್ಕೂ ಹೆಚ್ಚು ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪರೀಕ್ಷೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳು ಮತ್ತು ಹೊಸ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಸಚಿವಾಲಯ ಹೇಳಿದೆ.

ಸದ್ಯ ಈಗ ದಾಖಲಾಗುತ್ತಿರುವ ದೇಶದ ಒಟ್ಟಾರೆ ಸೋಂಕಿನಲ್ಲಿ ಶೇಕಡ 54 ರಷ್ಟು ಸೋಂಕಿನ ಪ್ರಮಾಣ ಆರು ರಾಜ್ಯಗಳಲ್ಲಿ ದಾಖಲಾಗುತ್ತಿವೆ. ರಾಜ್ಯಗಳೆಂದರೆ ಪಶ್ಚಿಮ ಬಂಗಾಳ, ದೆಹಲಿ, ಕೇರಳ, ಮಹಾರಾಷ್ಟ್ರ, ಸೇರಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ