ಕೊರೋನಾ ರೋಗಿಗಳ ಸೇವೆ ಮಾಡಿ ಮಾದರಿಯಾದ ಪತ್ರಕರ್ತರು

(ಸಂಜೆವಾಣಿ ವಾರ್ತೆ)
ಇಂಡಿ :ಜೂ.8:ಪತ್ರಕರ್ತರಾಗಿ ಸಮಾಜದಲ್ಲಿ ಬದ್ದತೆಯ ಮೆರೆಯುವುದರ ಜೊತೆಗೆ ಕೊರೋನಾ ರೋಗಿಗಳ ಸೇವೆ ಮಾಡಿ ಮಾನವೀಯತೆ ಮೆರೆದಿದ್ದಾರೆ.ಕೊರೋನಾ ರೋಗಿಗಳ ಜೊತೆ ಮಾತನಾಡಿದರೆ,ಅವರ ಜೊತೆ ಕುಳಿತುಕೊಂಡರೆ ಕೊರೋನಾ ರೋಗ ನಮಗೂ ತಗಲುತ್ತದೆ ಎಂಬ ಭಯದಲ್ಲಿರುವ ಜನರ ಮಧ್ಯದಲ್ಲಿಯೇ ಸದ್ದಿಲ್ಲದೆ ಪತ್ರಕರ್ತರಿಬ್ಬರು ಕೊರೋನಾ ರೋಗಿಗಳಿಗೆ ಆಕ್ಸೀಜನ್ ಹಚ್ಚುವುದು, ನಡೆಯಲು ಆಗದಿದ್ದರೆ ಅವರಿಗೆ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಮಲಗಿಸುವುದು, ಚಿಕಿತ್ಸೆ ಫಲಿಸದೆ ಮೃತಪಟ್ಟರೆ ಶವಕಟ್ಟಿ ಜೀಪಿನಲ್ಲಿ ಇಡುವ ಕೆಲಸ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಕೊರೋನಾ ರೋಗದ ಭಯದಲ್ಲಿ ಇರುವವರಿಗೆ,ಕೊರೋನಾ ರೋಗದ ಬಗ್ಗೆ ಭಯ ಬೇಡ ಎಚ್ಚರಿಕೆ ಇರಲಿ ಎಂಬ ಸ್ಲೋಗನ್‍ಗೆ ಮಾದರಿಯಾಗಿದ್ದಾರೆ.
ಇಂಡಿ ಪಟ್ಟಣದ ನಿವಾಸಿ ಯೂಟೂಬ ಚಾನಲ್ ವರದಿಗಾರ ಫಯಾಜಅಹ್ಮದ ಬಾಗವಾನ ಹಾಗೂ ಹಿರೇಮಸಳಿ ಗ್ರಾಮದ ನಿವಾಸಿ ಐ ನ್ಯೂಜ್ ಟಿವಿ ಚಾನಲ್ ವರದಿಗಾರ ಶಿವಾನಂದ ಮಲಕಗೊಂಡ ಹಿಂಥ ಸಾಹಸ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಇಂಡಿ ತಾಲೂಕಿನ ಕೆಲ ಹಳ್ಳಿಯ ಕೊರೋನಾ ಚಿಕಿತ್ಸೆಗಾಗಿ ತಮ್ಮ ತಾಯಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೋದ ಮಕ್ಕಳು ಮರಳಿ ಬಂದಿರುವುದಿಲ್ಲ. ಅಂತಹ ವೃದ್ದ ಕೊರೋನಾ ರೋಗಿಗಳ ಬಳಿ ನಿತ್ಯ ಹೋಗಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿ,ವೈದ್ಯರಿಂದ ಚಿಕಿತ್ಸೆ ನೀಡಿಸಿದ್ದಾರೆ. ಅಲ್ಲದೆ ಕೆಲ ಕೊರೋನಾ ರೋಗಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟಾಗ ಅವರ ಸಂಬಂ„ಕರು ಶವ ಹಿಡಿಯಲು ಹಿಂದೇಟು ಹಾಕುತ್ತಿದ್ದರು.ಆವಾಗ ಈ ಇಬ್ಬರು ಪತ್ರಕರ್ತರು ಸ್ವತ ಶವವನ್ನು ಎತ್ತಿ ಜೀಪಿನಲ್ಲಿ ಅವರ ಗ್ರಾಮಕ್ಕೆ ಸಾಗಿಸಿದ ಉದಾಹರಣೆ ಇದೆ. ಇವರ ಸೇವೆಯನ್ನು ಸ್ವತ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾ„ಕಾರಿಗಳೇ ಪ್ರಶಂಸಿಸಿದ್ದಾರೆ. ಕೇಲವ ಪತ್ರಕರ್ತರಾಗಿ ಸೇವೆ ಮಾಡದೆ ಹಿಂಥ ಸಂದಿಗ್ದ ಪರಿಸ್ಥಿತಿಯಲ್ಲಿ ಕೊರೋನಾ ರೋಗಿಗಳ ಸೇವೆ ಮಾಡಿ ಸಮಾಜದಲ್ಲಿ ಶಬ್ಬಶಗೀರಿ ಪಡೆದುಕೊಂಡಿರುವ ಈ ಇರ್ವರು ಪತ್ರಕರ್ತರ ಸೇವೆಯನ್ನು ಸಾರ್ವಜನಿಕರು ಕೊಂಡಾಡಿದ್ದಾರೆ.

ಕೊರೋನಾ ರೋಗಿಗಳ ಸಮೀಪ ಸುಳಿಯದ ಸಂಬಂ„ಕರು,ರೋಗಿಗಳ ನರಳಾಟದಲ್ಲಿರುವÀ ಹಿಂಥ ಸಂದಿಗ್ದ ಪರಿಸ್ಥಿತಿಯಲ್ಲಿ ಕೊರೋನಾ ರೋಗಿಗಳ ಸೇವೆ ಮಾಡಬೇಕು ,ಅವರಿಗೆ ಧೈರ್ಯ ತುಂಬಬೇಕು ಎಂಬ ಭಾವನೆಯಿಂದ ಅವರ ಸೇವೆ ಮಾಡಿದ್ದೇವೆ. ನಮಗೆಲ್ಲ ಆಸ್ಪತ್ರೆಯ ಎಲ್ಲ ವೈದ್ಯರು,ಸಿಬ್ಬಂದಿ ಸಹಕಾರ ನೀಡಿದ್ದಾರೆ. ರೋಗಿಗಳ ಸೇವೆ ಮಾಡಿದ್ದೇವೆ ಎನ್ನುವುದಕ್ಕಿಂತ ರೋಗಿಗಳ ಸೇವೆಗಾಗಿ ಭಗವಂತ ಕಳುಹಿಸಿದ್ದಾನೆ.ಅವರೆಲ್ಲ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಬೇಕು ಎಂಬುದೊಂದೆ ನಮ್ಮ ಆಸೆಯಾಗಿತ್ತು.ಇದೊಂದು ದೇವರ ಸೇವೆ ಮಾಡಿದಂತೆ ಎಂದು ಭಾವಿಸಿದ್ದೇವೆ.

ಫಯಾಜ ಅಹ್ಮದ ಬಾಗವಾನ, ಶಿವಾನಂದ ಮಲಕಗೊಂಡ, ಪತ್ರಕರ್ತರು, ಇಂಡಿ.

ಕೊರೋನಾ ಆರಂಭದ ದಿನದಲ್ಲಿ ಆಸ್ಪತ್ರೆಗೆ ದಿನಕ್ಕೆ 20 ರಿಂದ 30 ಜನರು ಚಿಕಿತ್ಸೆಗಾಗಿ ಬರುವವರು,ಬಂದವರಿಗೆ ಆಕ್ಸೀಜನ್ ಬೆಡ್ ಒದಗಿಸುವುದಾದರೂ ಹೇಗೆ ಎಂದು ಚಿಂತಿಸುತ್ತಿದ್ದೆ.ಫಯಾಜಅಹ್ಮದ ಬಾಗವಾನ,ಶಿವಾನಂದ ಮಲಕಗೊಂಡ ಪತ್ರಕರ್ತರಾಗಿ ಆಸ್ಪತ್ರೆಗೆ ಬಾರದೆ, ಕೊರೋನಾ ರೋಗಿಗಳ ಸೇವೆಗೆಂದು ಬಂದವರಾಗಿದ್ದರು. ಅವರೆಲ್ಲ ನಮ್ಮ ಸಿಬ್ಬಂದಿಗೆ ಸಾಥ ನೀಡಿದ್ದಾರೆ. ಮಧ್ಯ ರಾತ್ರಿಯಲ್ಲಿಯೂ ಕರೆ ಮಾಡಿದರೆ ಬಂದು ನಮಗೆ ಹಾಗೂ ಕೊರೋನಾ ರೋಗಿಗಳಿಗೆ ಸಹಾಯ ಮಾಡುತ್ತಿದ್ದರು, ಆಕ್ಸೀಜನ್ ಸಿಲೆಂಡರ್ ಇಳಿಸುವುದು,ನಮ್ಮ ಸಿಬ್ಬಂದಿ ಕೊರತೆಯಾದಾಗ ಸಿಲಿಂಡರ್ ಇಳಿಸಿ ಕೊಣೆಯಲ್ಲಿ ಇಡುವ ಕೆಲಸವೂ ಮಾಡಿದ್ದಾರೆ. ಯಾವುದೇ ಅಪೇಕ್ಷೆ ಮಾಡದೆ ಸೇವೆ ಮಾಡಿದ್ದಾರೆ. ಸಿಬ್ಬಂದಿ ಕೊರತೆಯ ಮಧ್ಯದಲ್ಲಿ ನಮಗೆ ಇಬ್ಬರು ಬಹಳಷ್ಟು ಸಹಾಯ ಮಾಡಿದ್ದಾರೆ.
ಡಾ.ರಾಜೇಶ ಕೊಳೆಕರ, ಮುಖ್ಯವೈದ್ಯಾ„ಕಾರಿ,
ಸರ್ಕಾರಿ ಆಸ್ಪತ್ರೆ ಇಂಡಿ.