ಕೊರೋನಾ ಮುಕ್ತಿಗೆ ವಿಶೇಷ ಪೂಜೆ

ಕೊಟ್ಟೂರು ಜೂ 10,,.ಕೊರೋನಾ ರೋಗಕ್ಕೆ ಜನತೆ ಹೈರಾಣಾಗಿದ್ದು ಇದರಿಂದ ಮುಕ್ತಿ ನೀಡುವಂತೆ ಅಮಾವಾಸ್ಯೆಯ ದಿನವಾದ ಇಂದು ಪಟ್ಟಣದ ಆರಾಧ್ಯ ದೈವ,ಭವರೋಗ ನಿವಾರಕ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಾಲಯದಲ್ಲಿ ಬೆಳಗಿನ ಜಾವ 5ಗಂಟೆಗೆ ಪ್ರಧಾನ ಧರ್ಮಕರ್ತ ಸಿಹೆಚ್ ಎಂ ಗಂಗಾಧರಯ್ಯ ಹಾಗೂ ಪುರೋಹಿತರು ವಿಶೇಷ ಪೂಜೆ, ಅಭಿಷೇಕ ನೇರವೇರಿಸಿ ಪ್ರಾರ್ಥನೆ ಸಲ್ಲಿಸಿದರು.