ಕೊರೋನಾ ಭಾರಿ ಇಳಿಕೆ: ಇಂದು 662 ಜನರಿಗೆ ಸೋಂಕು


ಬೆಂಗಳೂರು, ಡಿ. ೧೪- ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಗುಣಮುಖರಾಗುವ ಸಂಖ್ಯೆಯೂ ಹೆಚ್ಚಿದೆ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ಬೆಂಗಳೂರು ಮೈಸೂರಿನಲ್ಲಿ ತಲಾ ಇಬ್ಬರು ಕರೋನ ಸೋಂಕಿತರು ಮೃತಪಟ್ಟಿರುವುದನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕರೋನ ಶೂನ್ಯ ಸಾವು ವರದಿಯಾಗಿದೆ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿದೆ ಮೂರು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇಒಂದು ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ.
ಕಳೆದ ಮೂರು ದಿನಗಳಿಂದ ಸತತವಾಗಿ ಹೊಸ ಪ್ರಕರಣಗಳ ಸಂಖ್ಯೆ ಸಾವಿರದಿಂದ ಕೆಳಗಿಳಿದಿದೆ. ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಐನೂರಕ್ಕಿಂತ ಕೆಳಗೆ ಬಂದಿದೆ.
ಇಂದು ರಾಜ್ಯದಲ್ಲಿ ಜನರಿಗೆ662 ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ 1344 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ 04 ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 917571ಕ್ಕೆ ಏರಿದೆ. ಇವರಲ್ಲಿ893617 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 11861ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12074 ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 206 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 370 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು843 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಇಂದು ಬೆಂಗಳೂರಿನಲ್ಲಿ 02ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 387278ಕ್ಕೆ ಏರಿದೆ. ಇದುವರೆಗೂ 375221 ಜನ ಗುಣಮುಖರಾಗಿದ್ದಾರೆ. 7750 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4306 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 02, ಬಳ್ಳಾರಿ 14ಬೆಳಗಾವಿ 06, ಬೆಂಗಳೂರು ಗ್ರಾಮಾಂತರ 04 ಬೀದರ್‌ 01ಚಾಮರಾಜನಗರ 08 ಚಿಕ್ಕಬಳ್ಳಾಪುರ 18 ಚಿಕ್ಕಮಗಳೂರು 06 ಚಿತ್ರದುರ್ಗ 07, ದಕ್ಷಿಣ ಕನ್ನಡ 35, ದಾವಣಗೆರೆ 12 ಧಾರವಾಡ 10 ಗದಗದಲ್ಲಿ 00ಹಾಸನದಲ್ಲಿ 25 ಹಾವೇರಿ 00 ಕಲಬುರಗಿ 05 ಕೊಡಗು01, ಕೋಲಾರ 31 ಕೊಪ್ಪಳ 06ಮಂಡ್ಯ 14, ಮೈಸೂರು 23 ರಾಯಚೂರು 01, ರಾಮನಗರ 00 ಶಿವಮೊಗ್ಗ 07, ತುಮಕೂರು 38 ಉಡುಪಿ 07, ಉತ್ತರ ಕನ್ನಡ 05 ವಿಜಯಪುರ 05 ಹಾಗೂ ಯಾದಗಿರಿಯಲ್ಲಿ 01ಪ್ರಕರಣಗಳು ಪತ್ತೆಯಾಗಿವೆ.