ಕೊರೋನಾ ಭಯನೇ ಇಲ್ವಾ ಜನಕ್ಕೆ? ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್..!

(ದೇವಪ್ಪ ಹಂಚಿನಾಳ)
ಗಬ್ಬೂರು.ಮೇ.೨೧-ದೇವದುರ್ಗ ತಾಲುಕಿನಾದ್ಯಂತ ಸಾಮೂಹಿಕ ಮದುವೆಗಳಲ್ಲಿ ಸಾರ್ವಜನಿಕರು ಕೊರೋನಾ ಭಯವಿಲ್ಲದೆ ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್ ಅಂತಿದ್ದಾರೆಂದು ಭೀಮರಾಯ ಅವರ ಆರೋಪವಾಗಿದೆ. ದೇಶದಲ್ಲಿ ಕೊರೋನಾ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಜಾಗೃತರಾಗಿ ಎಂದು ಸರಕಾರ ಹೇಳುತ್ತಿದ್ದರೆ.
ಜೊತೆಗೆ ಕಾಯಿಲೆಯಿಂದ ಸಾರ್ವಜನಿಕರನ್ನು ರಕ್ಷಿಸಲು ಸರ್ಕಾರವು ಹಲವಾರು ಕಾನೂನು ನಿಯಮ ನಿಬಂಧನೆಗಳ ಜೊತೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಹಾಗೂ ಮುಖಕ್ಕೆ ಮುಖಗವಸ (ಮಾಸ್ಕೂ)ಹಾಕುವ ಮೂಲಕ ಜಾಗೃತರಾಗಿ ಎಂದು ಜಾಗೃತ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಮಾಡಿದರು ಸರ್ಕಾರ ಎಷ್ಟೆ ಗೋಗರೆದರೂ ಸಾರ್ವಜನಿಕರು ಅದನ್ನು ಲೆಕ್ಕಿಸದೆ ಸಾವಿರಾರು ಜನಸ್ತೋಮದ ನಡುವೆ ಮದುವೆಗಳಲ್ಲಿ ಸಾವಿನ ನೋವಿನ ಜನದಟ್ಟಣೆಯ ಸಮಯದಲ್ಲಿ ಜನರು ಸರ್ಕಾರ ಮತ್ತು ಅಧಿಕಾರಿಗಳ ಮನವಿಗೆ ಸ್ಪಂದನೆ ಮಾಡದೆ ಅತ್ಯುನ್ನತ ತಮ್ಮಾ ಜೀವನದ ಬೆಲೆ ತಿಳಿಯದೆ ಇನ್ನೊಬ್ಬರಿಗೆ ನಮ್ಮಿಂದ ತೊಂದರೆ ಆಗಬಹುದಾದ ಅನಾಹುತದ ಅರಿವಿಲ್ಲದ ರೀತಿಯಲ್ಲಿ ಬಹುಸಂಖ್ಯೆಯಲ್ಲಿ ಭಾಗವಹಿಸುವ ಸಾಮೂಹಿಕ ವಿವಾಹ ಮತ್ತು ಜಾತ್ರೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮೆಲ್ಲರ ಅಲಕ್ಷ್ಯತನ ನಡೆ ಮನುಕುಲಕ್ಕೆ ಮಾರಕ ಆಗಬಹುದು ಎಂಬ ಭಯವು ಕೆಲವರಲ್ಲಿ ಕಾಡತೊಡಗಿದೆ.
ದೇವರು ಹೆಸರಿನಲ್ಲಿ ಕುರಿ ಕೋಣ ಮರಿ ಕೋಳಿ ಆಡು ಮೇಕೆ ಹಲವಾರು ಪ್ರಾಣಿಗಳ ಜೀವ ತೆಗೆಯುವ ನೇಪದ ಮೂಲಕ ನಮ್ಮನ್ನು ನಾವೇ ಸರ್ವನಾಶಕ್ಕೆ ಮುಂದಾಗುವಂತ ಅನಾಹುತದ ಪರಿಸ್ಥಿತಿಗೆ ವೇದಿಕೆ ನಿರ್ಮಾಣವಾಗಿದ್ದು ಎನ್ನುವ ಅಂತಕ ಅನುಮಾನ ಚಿಂತಕರಲ್ಲಿ ಕಾಡುತ್ತಿದೆ.
ದೇಶದಲ್ಲಿ ಆವರಿಸಿಕೊಂಡಿದ್ದರುವ ಮಹಾಮಾರಿ ರೋಗಗಳು ದೂರ ಅಗುವವರಿಗೂ ಸಾರ್ವಜನಿಕರು ಸಹಕರಿಸುತ್ತಾರೆ ಎನ್ನುವಂಥ ಆಶಾಭಾವನೆ ಇಟ್ಟುಕೊಂಡಿರುವ ಸರಕಾರಕ್ಕೂ ವೈದ್ಯರ ತಂಡಕ್ಕೂ ವಿಜ್ಞಾನಿಗಳಿಗೂ ದೇಶದ ಚಿಂತಕರಿಗೂ ಮುಂದಿನ ಯುವ ಪೀಳಿಗೆಯ ಮುಗ್ಧರಿಗೂ ಸಹಕರಿಸುತ್ತಾರೋ ಇಲ್ಲವೋ ಎನ್ನುವ ಆತಂಕದ ಜೀವಗಳಿಗೆ ಸಾರ್ವಜನಿಕರು ಈಗಲಾದರೂ ಮುಂದಿನ ದಿನಗಳಲ್ಲಿ ಜನರು ಬದುಕಿನ ಆಲೋಚನೆಯನ್ನು ಮಾಡಿ ಸರ್ಕಾರದ ನಿರ್ದೇಶನದಂತೆ ಹಾಗೂ ವೈಯಕ್ತಿಕವಾಗಿ ತಮ್ಮ ಜೀವನವು ಹಾಗೂ ಕೆಲವು ಜೀವಗಳಿಗೂ ತೊಡಕುಗಳು ತಪ್ಪಿಸಲು ಜಾಗೃತರಾಗಿ ಬಾಳಬೇಕಾದ ಅವಶ್ಯಕತೆ ಇದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಳ್ಳಿಗಳಲ್ಲಿ ನಡೆಯುವ ಮದುವೆಗಳಿಗೆ ಕಡಿವಾಣ ಹಾಕಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ.