ಕೊರೋನಾ ಪಾಸಿಟಿವ್ ಪ್ರಕರಣ ಕಲಬುರಗಿ ನಗರ ಮುಂಚೂಣಿಯಲ್ಲಿ

ಕಲಬುರಗಿ ಏ 21: ಜಿಲ್ಲೆಯಲ್ಲಿ ಕಳೆದ ವರ್ಷ ಕೊರೋನಾ ಹಾವಳಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಕಲಬುರಗಿ ನಗರದಲ್ಲಿ ಅತಿ ಹೆಚ್ಚು ಕೋವಿಡ್ 19 ಪಾಸಿಟಿವ್ ಪ್ರಕರಣ ಮತ್ತು ಇದರಿಂದಾಗ ಅತಿ ಹೆಚ್ಚಿನ ಸಾವು ಸಂಭವಿಸಿವೆ.
ನಗರದಲ್ಲಿ ಇಲ್ಲಿಯವರೆಗೆ 16866 ಪಾಸಿಟಿವ್ ಪ್ರಕರಣ ದಾಖಲಾಗಿವೆ.257 ಸಾವು ಸಂಭವಿಸಿವೆ.
ಯಡ್ರಾಮಿ ತಾಲೂಕಿನಲ್ಲಿ ಜಿಲ್ಲೆಯ ಅತಿ ಕಡಿಮೆ 348 ಪಾಸಿಟಿವ್ ಪ್ರಕರಣ ಮತ್ತು 2 ಸಾವು ಸಂಭವಿಸಿವೆ.ಕಾಳಗಿ ತಾಲೂಕಿನಲ್ಲಿ 369 ಪ್ರಕರಣ ದಾಖಲಾಗಿದ್ದು ಒಂದೂ ಸಾವು ಸಂಭವಿಸಿಲ್ಲ.
ಸೇಡಂ ಮತ್ತು ಅಳಂದ ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣ 2 ಸಾವಿರದ ಗಡಿ ದಾಟಿವೆ.ಸೇಡಂ ತಾಲೂಕಿನಲ್ಲಿ 2244 ಅಳಂದ ತಾಲೂಕಿನಲ್ಲಿ 2112 ಪ್ರಕರಣ ದಾಖಲಾಗಿವೆ.ಚಿತ್ತಾಪುರ ( 1843) ಚಿಂಚೋಳಿ ( 1683)
ಅಫಜಲಪುರ ( 1553) ಜೇವರಗಿಯಲ್ಲಿ 1329 ಪ್ರಕರಣಗಳು ದಾಖಲಾಗಿವೆ.
ಸಾವು:
ಕಲಬುರಗಿ ತಾಲೂಕು ಬಿಟ್ಟರೆ ಇದುವರೆಗೆ ಅತಿ ಹೆಚ್ಚು ಕೋವಿಡ್ ಸಾವು ಸಂಭವಿಸಿದ್ದು,ಅಳಂದ ತಾಲೂಕಿನಲ್ಲಿ .ಇಲ್ಲಿ 24 ಸಾವು ಸಂಭವಿಸಿವೆ.ಚಿತ್ತಾಪುರ ಶಹಾಬಾದ ತಾಲೂಕುಗಳಲ್ಲಿ ತಲಾ 17,ಅಫಜಲಪುರ(15),ಜೇವರಗಿ (13) ,ಚಿಂಚೋಳಿ ತಾಲೂಕಿನಲ್ಲಿ 12 ಸಾವು ಸಂಭವಿಸಿವೆ.
ಗುಣಮುಖ:
ಕಲಬುರಗಿ ನಗರದಲ್ಲಿ ಇದೂವರೆಗೆ ಕೊರೋನಾ ಸೋಂಕಿನಿಂದ 13716 ಜನ ಗುಣಮುಖರಾಗಿದ್ದು ಗುಣಮುಖರಾದವರ ಸಂಖ್ಯೆಯಲ್ಲಿ ನಗರ ಮುಂಚೂಣಿಯಲ್ಲಿದೆ.
ಸೇಡಂ ತಾಲೂಕಿನಲ್ಲಿ 1931,ಅಳಂದ ತಾಲೂಕಿನಲ್ಲಿ 1800 ,ಚಿತ್ತಾಪುರ 1598,ಅಫಜಲಪುರ 1374,ಚಿಂಚೋಳಿ 1356,ಜೇವರಗಿ 1171 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.