ಕೊರೋನಾ- ಪರೀಕ್ಷೆ ಭಯ ಬಿಟ್ಟು ಧೈರ್ಯವಾಗಿ ಪರೀಕ್ಷೆ ಎದುರಿಸಲು ಕಲಾಕುಂಚ ಕರೆ

ದಾವಣಗೆರೆ, ಏ.೨೨:ಸಾರ್ವಜನಿಕ ಶಿಕ್ಷಣ ಇಲಾಖೆಯ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆ 2021ನೇ ಜೂನ್ 21 ರಿಂದ ಜುಲೈ 5ರವರೆಗೆ ನಿಗದಿಯಾಗಿದ್ದು ಮಕ್ಕಳು ಯಾವುದೇ ರೀತಿಯಲ್ಲಿ ಕರೋನಾ ಮತ್ತು ಪರೀಕ್ಷೆ ಭಯಬಿಟ್ಟು ಧೈರ್ಯವಾಗಿ ಇಚ್ಚಾಶಕ್ತಿಯಿಂದ ಬದ್ಧತೆಯಿಂದ ಪರೀಕ್ಷೆ ಎದುರಿಸಿ ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕರೆ ಕೊಟ್ಟಿದ್ದಾರೆ.ಎಸ್.ಎಸ್.ಎಲ್.ಸಿ. ಪರೀಕ್ಷೆ ಎನ್ನುವುದು ಮಕ್ಕಳ ಶೈಕ್ಷಣಿಕ ಮತ್ತು ಜೀವನದ ಒಂದು ತಿರುವು ಇಲ್ಲಿ ಪ್ರಬುದ್ಧವಾಗಿ ದೂರದೃಷ್ಟಿಯಿಂದ ಪರೀಕ್ಷೆಯನ್ನು ಬರೆದು ಉತ್ತಮ ಅಂಕ ಗಳಿಸಿದರೆ ಮುಂದಿನ ಉಜ್ವಲ ಭವಿಷ್ಯದ ಶೈಕ್ಷಣಿಕ ಸಾಧನೆಗೆ ಭದ್ರವಾದ ಬುನಾದಿ ಆಗುತ್ತದೆ. ಅಗ್ರಮಾನ್ಯ ಫಲಿತಾಂಶ ಮುಂದಿನ ಉನ್ನತ ಮಟ್ಟದ ಶಿಕ್ಷಣದ ಪ್ರವೇಶಗಳು ಉಚಿತವಾಗುತ್ತದೆ ಮತ್ತು ಪೋಷಕರಿಗೆ ಆರ್ಥಿಕ ಹೊರೆ ಕಡಿಮೆ ಆಗುತ್ತದೆ. ಜತೆಯಲ್ಲಿ ಕಳೆದ ಮೂವತ್ತೊಂದು ವರ್ಷಗಳಿಂದ ಪ್ರತೀ ವರ್ಷ ನಡೆಸಿಕೊಂಡು ಬಂದ ಕಲಾಕುಂಚದ ವಿವಿಧ ರಾಜ್ಯ ಪ್ರಶಸ್ತಿಗೂ ಭಾಜನರಾಗಬಹುದು. ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ “ಕನ್ನಡ ಕೌಸ್ತುಭ” ಒಟ್ಟು ಅಂಕ 625 ಕ್ಕೆ 600ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿಗಳನ್ನು ನಾಡಿನ ಗಣ್ಯಮಾನ್ಯರಿಂದ ಸಾಹಿತ್ಯ ದಿಗ್ಗಜರಿಂದ ವಿಶೇಷವಾದ ವೇದಿಕೆಯ ಸಿಂಹಾಸನದ ಮೇಲೆ ಕೂರಿಸಿ ಪುಷ್ಟವೃಷ್ಟಿಯೊಂದಿಗೆ ತಲೆಮೇಲೆ ಕಿರೀಟವಿಟ್ಟು ಸ್ಮರಣಿಕೆ, ಪ್ರಶಸ್ತಿ ಪತ್ರ, ಪದಕಗಳೊಂದಿಗೆ ಗೌರವಿಸಿ ಸನ್ಮಾನಿಸಲಾಗುವುದು.ಈ ಹಿನ್ನಲೆಯಲ್ಲಿ ಪರೀಕ್ಷೆಯ ಉತ್ತಮ ಫಲಿತಾಂಶಕ್ಕಾಗಿ ಮಕ್ಕಳಿಗೆ ಮಾನಸಿಕ ಧೈರ್ಯ ತುಂಬಲು ಅನೇಕ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಚಂದನ ವಾಹಿನಿಯಲ್ಲಿ “ಥಟ್ ಅಂತ ಹೇಳಿ” ಕಾರ್ಯಕ್ರಮ ನಡೆಸಿಕೊಡುವ ಖ್ಯಾತ ಹಿರಿಯ ಸಾಹಿತಿಗಳಾದ ಡಾ. ನಾ.ಸೋಮೇಶ್ವರರವರು “ಕಲಿಕೆ ಓದು ನೆನಪು” ಕಿರು ಕೈಪಿಡಿ ಪ್ರಕಟಿಸಿದ್ದು ಈ ಪುಸ್ತಕದ ಓದುವಿಕೆಯಿಂದ ಮಕ್ಕಳ ಉತ್ತಮ ಫಲಿತಾಂಶದ ದಾರಿ ಸುಗಮವಾಗುತ್ತದೆ. ಆತ್ಮಸ್ಥೆöÊರ್ಯ ಹೆಚ್ಚುತ್ತದೆ. ಆಸಕ್ತ ಶಿಕ್ಷಣ ಸಂಸ್ಥೆಗಳು, ಶೈಕ್ಷಣಿಕ ಕಾಳಜಿಯ ಸಂಘಟನೆಗಳು, ಪೋಷಕರು 9901122728, 9538732777 ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ.ಲೋಕೇಶ್ ತಿಳಿಸಿದ್ದಾರೆ.