ಕೊರೋನಾ ಪರಿಸ್ಥಿತಿಯಲ್ಲಿ ಜನರಿಗೆ ಅನುಕೂಲ ಮಾಡಿ : ವಿಜಯಕುಮಾರ್

ಹನೂರು, ನ.20: ಜನರು ಕೊರೋನಾ ಸಂದಿಗ್ಧ ಪರಿಸ್ಥಿಯಲ್ಲಿದ್ದು ಬ್ಯಾಂಕ್‍ಗಳು ಜನರಿಗೆಆರ್ಥಿಕವಾಗಿ ಸಹಾಯ ಮಾಡುವಂತೆ ಲೀಡ್ ಬ್ಯಾಂಕ್ ಸಹಾಯಕ ಮುಖ್ಯ ವ್ಯವಸ್ಥಾಪಕ ವಿಜಯಕುಮಾರ್ ತಿಳಿಸಿದರು.
ಹನೂರು ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಬಿ.ಎಲ್.ಬಿ.ಸಿ ಸಭೆ ಉದ್ದೇಶಿಸಿ ಮಾತನ್ನಾಡುತ್ತಾ, ಕೊರೋನಾದಿಂದಾಗಿಜನರು ಬಹಳ ಸಂಕಷ್ಟದಲ್ಲಿದ್ದಾರೆ, ಬ್ಯಾಂಕ್ ವತಿಯಿಂದದೊರೆಯುವ ಸಾಲ ಸೌಲಭ್ಯಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ನೆರೆದಿದ್ದ ಬ್ಯಾಂಕ್‍ಅಧಿಕಾರಿಗಳಿಗೆ ತಿಳಿಸಿದ ಅವರುಕೃಷಿ ಸಾಲ, ವ್ಯಾಪಾರ ಸಾಲ, ಉದ್ದಿಮೆ ಸ್ಥಾಪನೆ ,ಮನೆ, ವಿದ್ಯಾಭ್ಯಾಸ , ವಾಹನ ಸಾಲ, ವೈಯಕ್ತಿಕ ಸಾಲ ಮುಂತಾದ ಸಾಲ ಸೌಲಭ್ಯ ನೀಡಿ ಮತ್ತು ಹೆಚ್ಚೆಚ್ಚು ಉಳಿತಾಯ ಖಾತೆತೆರೆಯಿರಿ ಹಾಗು ಡಿಸಿಟಲ್ ಪಾವತಿ ಸಂಬಂಧಿಸಿದಂತೆ ಪ್ರಗತಿ ಸಾಧಿಸುವಂತೆ ತಿಳಿಸಿದರು.
ದೇವರಾಜುಅರಸು ಮತ್ತು ವಾಲ್ಮೀಕಿ ನಿಗಮದ ಸಿಬ್ಬಂಧಿಗಳು ಹಾಜರಾಗಿ 9 ಫಲಾನುಭವಿಗಳ ಅರ್ಜಿಅನುಮೋದನೆ ಮಾಡಿಲ್ಲಎಂದು ಬ್ಯಾಂಕ್‍ಗಳ ಹೆಸರನ್ನು ಹೇಳಿದಾಗ ಲೀಡ್ ಬ್ಯಾಂಕ್ ಸಹಾಯಕ ಮುಖ್ಯ ವ್ಯವಸ್ಥಾಪಕ ವಿಜಯಕುಮಾರ್‍ರವರು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ ಬೇಗ ಅನುಮೋದನೆದೊರೆಯುವಂತೆ ತಿಳಿಸಿದರು.
ಕೇವಲ ಬ್ಯಾಂಕ್ ಸಿಬ್ಬಂಧಿಗಳಿಗೆ ಮೀಸಲಾದ ಬಿ.ಎಲ್.ಬಿ.ಸಿ ಮೀಟಿಂಗ್: ಲೀಡ್ ಬ್ಯಾಂಕ್ ಸಹಾಯಕ ಮುಖ್ಯ ವ್ಯವಸ್ಥಾಪಕ ವಿಜಯಕುಮಾರ್‍ರವರ ನೇತೃತ್ವದಲ್ಲಿ ನಡೆದ ಬಿ.ಎಲ್.ಬಿ.ಸಿ ಸಭೆಯಲ್ಲಿ ಕೇವಲ ಬ್ಯಾಂಕ್ ಸಿಬ್ಬಂಧಿಗಳು ಮಾತ್ರ ಸಭೆಗೆ ಹಾಜರಾಗಿದ್ದು ಕೇವಲ ಡಿಸಿಟಲ್ ಎಂಪವಮೆರ್ಂಟ್ ಪೌಂಡೇಶನ್ ಸರ್ಕಾರೇತರ ಸಂಸ್ಥೆ, ವಾಲ್ಮೀಕಿ ನಿಗಮ ಮತ್ತುದೆವರಾಜುಅರಸು ನಿಗಮದ ಸಿಬ್ಬಂಧಿಗಳು ಸಭೆಗೆ ಹಾಗರಾಗಿದ್ದುಇತರ ಇಲಾಖೆ ಮತ್ತು ಸರ್ಕಾರೇತರ ಸಂಸ್ಥೆಗಳ ಗೈರು ಹಾಜರಾತಿಎದ್ದುಕಾಣುತ್ತಿತ್ತು. ತಾಲ್ಲೂಕು ಮಟ್ಟದ ಬ್ಯಾಂಕರ್ಸ್ ಸಭೆ ಎಂಬ ಹೆಸರಿದ್ದರೂ ಸರ್ಕಾರೇತರ ಸಂಸ್ಥೆಗಳು, ಇಲಾಖಾ ಅಧಿಕಾರಿಗಳು ಸಭೆಗೆ ಹಾಜರಿರಬೇಕೆಂಬ ನಿಯಮಇದೆ. ಆದರೆ ಕೇವಲ ಬ್ಯಾಂಕ್ ಅಧಿಕಾರಿಗಳು ಸಭೆಗೆ ಹಾಜರಿದ್ದು ಸಭೆ ಬ್ಯಾಂಕುಗಳ ಆರ್ಥಿಕ ಪ್ರಗತಿ ಪರಿಶೀಲನೆಗೆ ಸೀಮಿತವಾಯಿತು.
ಈ ಸಂದರ್ಭದಲ್ಲಿ ನಬಾರ್ಡ್ ಸಹಾಯಕ ಮುಖ್ಯ ವ್ಯವಸ್ಥಾಪಕಿಗೀತಾ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೂರ್ತಿ, ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.