ಕೊರೋನಾ ನಿಯಮ ಉಲ್ಲಂಘನೆ :3 ಅಂಗಡಿಗೆ ಬೀಗ

ವಿಜಯಪುರ 18- ಕೊರೋನಾ ನಿಯಮ ಉಲ್ಲಂಘಿಸಿದ ಮೂರು ಅಂಗಡಿಗಳಿಗೆ ಮಹಾನಗರ ಪಾಲಿಕೆ ಬೀಗ ಹಾಕಿದೆ.
ಜಿಲ್ಲಾದ್ಯಂತ ಕೊರೋನಾ ವೈರಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ವಿಜಯಪುರ ಜಿಲ್ಲಾಡಳಿತ ಮತ್ತುಮಹಾನಗರ ಪಾಲಿಕೆ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಿದ್ರೂ ವೈರಸ್ ನಿಯಮ ಉಲ್ಲಂಘಿಸಿದ ಮಾಡಿದವರ ವಿರುದ್ಧ ಮಹಾನಗರ ಪಾಲಿಕೆ ತಕ್ಕಶಾಸ್ತಿ ಮಾಡಿದೆ.ವಿಜಯಪುರ ನಗರದ ಶಾಸ್ತ್ರೀ ಮಾರ್ಕೆಟ ಹತ್ತಿರ ಕೊರೋನಾ ನಿಯಮ ಪಾಲಿಸದ ಅಂಗಡಿಯ ಮೇಲೆ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ನೇತೃತ್ವದಲ್ಲಿ ದಾಳಿಗೈದು ಬೀಗಜಡಿಯಲಾಗಿದೆ.ನಗರದ ಪೂರ್ವಿ, ಸಂಗೀತ ಮೊಬೈಲ್ ಶಾಫ್, ಪಕ್ಕದ ಅಂಗಡಿ ಸೇರಿ ಒಟ್ಟು ಮೂರು ಅಂಗಡಿಯ ಮೇಲೆ ಕೊರೋನಾ ನಿಯಮ ಪಾಲಿಸದ ಹಿನ್ನೆಲೆ ದಾಳಿ ಮಾಡಲಾಗಿದೆ ಎಂದು ಆಯುಕ್ತ ಹರ್ಷ ಶೆಟ್ಟಿ ಮಾಹಿತಿ ನೀಡಿದರು. ಇನ್ನು ಪಾಲಿಕೆ ವತಿಯಿಂದ 28 ಜನರ ತಂಡದಲ್ಲಿ ದಿನನಿತ್ಯ ಕೊರೋನಾ ನಿಯಮ ಉಲ್ಲಂಘನೆ ಮಾಡುವ ಅಂಗಡಿ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದರು.