ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ವಿತರಣೆ

ಗಂಗಾವತಿ ಮೇ 03 : ಸಾಮೂಹಿಕವಾಗಿ ಜೀವ‌ ಭಯ ಉಂಟು ಮಾಡಿರುವ ಕರೋನಾದಿಂದ ಜನರನ್ನು ರಕ್ಷಣೆ ಮಾಡುವ ಸಲುವಾಗಿ ನಿರ್ಗತಿಕರಿಗೆ ಕನಕಗಿರಿ ತಾಲೂಕಿನ ನವಲಿ ತಾಂಡದ ಎರಡನೇ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಹನುಮಮ್ಮ ಮಂಜುನಾಥ್ ಅವರು ಮಾಸ್ಕ್ ವಿತರಿಸಿದರು.
ಸ್ಥಳೀಯ ನಗರ ವಸತಿ ರಹಿತರಿಗೆ ಆಶ್ರಯದ ಎಲ್ಲ ನಿರ್ಗತಿಕರಿಗೆ ಮಾಸ್ಕ ವಿತರಿಸಿ ನೆರವಿನ ಚಾಚಿದ್ದಾರೆ.ಇವರ ಸಾಮಾಜಿಕ ಕಾರ್ಯಕ್ಕೆ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪತ್ರಕರ್ತ ರಾಮಮೂರ್ತಿ ನವಲಿ, ಮಂಜುನಾಥ ಹಾಗೂ ಆಶ್ರಯದ ಸಿಬ್ಬಂದಿ ಉಪಸ್ಥಿತರಿದ್ದರು.