ಕೊರೋನಾ ನಿಯಂತ್ರಣಕ್ಕೆ ಕಾರ್ಯಕ್ರಮಗಳಿಗೆ ನಿಬಂಧ- ಅಗತ್ಯ ಕ್ರಮ ಕೈಗೊಳ್ಳಲು ಸುಳ್ಯದಲ್ಲಿ ಫ್ಲೈಯಿಂಗ್ ಸ್ಕ್ವ್ವಾಡ್ ರಚನೆ

ಸುಳ್ಯ, ಎ.೨೭- ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಸುಳ್ಯ ತಾಲೂಕಿನಲ್ಲಿ ಫ್ಲೈಯಿಂಗ್ ಸ್ಕ್ವ್ವಾಡ್ ರಚಿಸಿದೆ.
ಸುಳ್ಯ ನಗರ ಪಂಚಾಯಿತಿ ಹಾಗೂ ಉಬರಡ್ಕಮಿತ್ತೂರು
ಭಾಗದ ಫ್ಲೈಯಿಂಗ್ ಸ್ಕ್ವ್ವಾಡ್ ಆಗಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಜಾಲ್ಸೂರು ಹಾಗೂ ಕನಕಮಜಲು ಗ್ರಾಮಕ್ಕೆ ಸುಳ್ಯ ಎ.ಪಿ.ಎಂ.ಸಿ. ಕಾರ್ಯದರ್ಶಿ ನಿರಂಜನ್ ಸಿ. ಹಿರೇಮಠ, ಸಂಪಾಜೆ ಹಾಗೂ ಅರಂತೋಡು ಗ್ರಾಮಕ್ಕೆ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ, ಬೆಳ್ಳಾರೆ ಹಾಗೂ ಪೆರುವಾಜೆ ಗ್ರಾಮಕ್ಕೆ ಸುಳ್ಯ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹರೀಶ್, ಕಳಂಜ ಹಾಗೂ ದೇವಚಳ್ಳ ಗ್ರಾಮಕ್ಕೆ ಸುಳ್ಯ ಬಿ.ಸಿ.ಎಂ ಇಲಾಖೆ ವಿಸ್ತರಣಾಧಿಕಾರಿ ಗಣೇಶ್ ನಾಯ್ಕ್, ಆಲೆಟ್ಟಿ ಹಾಗೂ ಐವರ್ನಾಡು ಗ್ರಾಮಕ್ಕೆ ಸುಳ್ಯ ವಲಯಾರಣ್ಯಾಧಿಕಾರಿ ಗಿರೀಶ್, ನೆಲ್ಲೂರು ಕೆಮ್ರಾಜೆ ಗ್ರಾಮಕ್ಕೆ ತೋಟಗಾರಿಕಾ ಇಲಾಖೆ ನಿರ್ದೇಶಕಿ ಸುಹಾನ, ಹರಿಹರಪಲ್ಲತ್ತಡ್ಕ, ಕೊಲ್ಲಮೊಗ್ರ ಹಾಗೂ ಗುತ್ತಿಗಾರು ಗ್ರಾಮಕ್ಕೆ ಸುಳ್ಯ ಅಬಕಾರಿ ಇನ್ಸ್‌ಪೆಕ್ಟರ್ ಸಿದ್ಧಪ್ಪ ಮೇಟಿ, ಕೊಡಿಯಾಲ, ಬಾಳಿಲ ಹಾಗೂ ಮುಪ್ಪೇರಿಯಾ ಗ್ರಾಮಕ್ಕೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ರಶ್ಮಿ, ಪಂಜ ಹಾಗೂ ಕಲ್ಮಡ್ಕ ಗ್ರಾಮಕ್ಕೆ ಪಂಜ ವಲಯಾರಣ್ಯಾಧಿಕಾರಿ ಮಂಜುನಾಥ್, ಅಮರಮುಡ್ನೂರು, ಮಂಡೆಕೋಲು ಹಾಗೂ ಅಜ್ಜಾವರ ಗ್ರಾಮಕ್ಕೆ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಣ್ಣೇಗೌಡ ಎಸ್., ಮತ್ತು ಮಕಂಜ ಹಾಗೂ ಮಡಪ್ಪಾಡಿ ಗ್ರಾಮಕ್ಕೆ ಯುವಜನ ಮತ್ತು ಕ್ರೀಡಾಧಿಕಾರಿ ವೆಂಕಟ್ರಮಣ ರವರನ್ನು ಸುಳ್ಯ ತಹಸೀಲ್ದಾರ್ ಕು.ಅನಿತಾಲಕ್ಷ್ಮೀಯವರು ನೇಮಕಗೊಳಿಸಿದ್ದಾರೆ.
ಸುಳ್ಯದಲ್ಲಿ ಕೊರೋನಾ ಪ್ರಕರಣ ಇಳಿಕೆ
ತಾಲೂಕಿನಲ್ಲಿ ಕೊರೊನಾ ಪ್ರಕರಣ ಸೋಮವಾರ ಕಡಿಮೆಯಾಗಿದೆ. ಇಂದು ಕೇವಲ ೬ ಮಂದಿಯಲ್ಲಿ ಪಾಸಿಟಿವ್ ಇರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ. ಪೆರುವಾಜೆ ಗ್ರಾಮದಲ್ಲಿ ೧, ಸುಬ್ರಹ್ಮಣ್ಯ ದಲ್ಲಿ ೨, ಪಂಜದಲ್ಲಿ ೨, ಅಮರಮುಡ್ನೂರಿನಲ್ಲಿ ಒಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.