ಕೊರೋನಾ ನಿಯಂತ್ರಣಕ್ಕೆ ಕರವೇ ಆಗ್ರಹ

ಕುಡುತಿನಿ,ಮೇ.4- ಪಟ್ಟಣದಲ್ಲಿ ಕಳೆದ ವರ್ಷ ಕೊರೋನ ಸೋಂಕಿತರ ಸಂಖ್ಯೆ ಶೂನ್ಯದಲ್ಲಿ ಇತ್ತು ಆದರೆ ಈ ಎರಡನೇ ಅಲೆ ಕೋರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಸೂಕ್ತವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ
ಈ ಕುರಿತಂತೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಾವಿ ಶಿವಕುಮಾರ್, ಖಜಾಂಚಿ ಆದ ಜಂಗ್ಲಿ ಸಾಬ್, ನಾಗಲಿಂಗ, ಆಚಾರಿ ಶರಣಪ್ಪ ಮನವಿ ಪತ್ರ ಸಲ್ಲಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕೊರತೆಯಿದ್ದು ಆರೋಗ್ಯಾಧಿಕಾರಿಗಳಿಗೆ ತಿಳಿಸಿ ವ್ಯಾಕ್ಸಿನ್ ಪ್ರಮಾಣ ಹೆಚ್ಚಿಸಬೇ ಕು ಮತ್ತು ಜಿಂದಾಲ್ ಗೆ ಹೋಗುವ ಕಾರ್ಮಿಕರನ್ನು ಜಿಂದಾಲ್ ನಲ್ಲಿ ಉಳಿಯುವ ವ್ಯವಸ್ಥೆ ಮಾಡಬೇಕೆಂದು ಕೊರೊನಾ ಸೋಂಕು ಹರಡುತ್ತಿರುವುದು ಅಲ್ಲಿಂದಲೇ ಜಿಂದಾಲ್ ಕಾರ್ಮಿಕರನ್ನು ಕೆಲಸಕ್ಕೆ ಹೋಗಬಾರದು ಎನ್ನುವುದು ತಪ್ಪು ಅವರನ್ನು ಅಲ್ಲಿ ಉಳಿಸುವ ವ್ಯವಸ್ಥೆ
ಮಾಡಿಕೊಡಿ ಎಂದು ತಿಳಿಸಿದರು. ಈ ಕೋರೋನ ಸಮಯದಲ್ಲಿ ಬಡ ಬಡಜನರು ಬದುಕುವುದೇ ಕಷ್ಟ ಇಂತಹ ಸಂದರ್ಭದಲ್ಲಿ ದಿನಸಿ ಪದಾರ್ಥಗಳನ್ನು ಪದಾರ್ಥಗಳನ್ನು ಕಿರಾಣಿ ಅಂಗಡಿ ಮಾಲೀಕರು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ
ಅವರನ್ನು ಕರೆದು ವರ್ತಕರ ಸಭೆ ನಡೆಸಿ ಆ ಪದಾರ್ಥದ ಬೆಲೆ ಏನಿರುತ್ತೆ ಅದೇ ಬೆಲೆಗೆ ಮಾರಾಟ ಮಾಡುವಂತೆ ಸಭೆ ನಡೆಸಿ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.