ಕೊರೋನಾ ನಿನ್ನೆಗಿಂತ ಶೇ.4 ರಷ್ಟು ಇಳಿಕೆ ದೇಶದಲ್ಲಿ 1.61 ಲಕ್ಷ ಮಂದಿಗೆ ಸೋಂಕು

ನವದೆಹಲಿ, ಏ.13- ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆತಂಕ ಸಿಲುಕುವಂತೆ ಮಾಡಿದೆ.

ನಿನ್ನೆ ದೇಶದಲ್ಲಿ ದಾಖಲಾಗಿದ್ದು ಒಟ್ಟಾರೆ ಸೋಂಕು ಪ್ರಕರಣಗಳಿಗಿಂತ ಇಂದು ಶೇ.4 ರಷ್ಟು ಕಡಿಮೆಯಾಗಿದೆ.‌ಇಂದು ಬೆಳಗ್ಗೆ 8 ಗಂಟೆಯ ತನಕ 1,61,736 ಮಂದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಹೊಸದಾಗಿ 879 ಮಂದಿ ಮೃತಪಟ್ಟಿದ್ದು 97,168 ಮಂದಿ‌ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ.

ದೇಶದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಎಲ್ಲಿಯವರೆಗೆ ಒಟ್ಟಾರೆ 1,36,89,453 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಇಂದು ಬಿಡುಗಡೆಯಾಗಿರುವ ಪ್ರಕಣಗಳು ಸೇರಿದಂತೆ ಇಲ್ಲಿಯವರೆಗೆ 1,22,53,697 ಮಂದಿ ದೇಶದಲ್ಲಿ ಚೇತರಿಸಿಕೊಂಡಿದ್ದಾರೆ.ಇದುವರೆಗೆ ದೇಶದಲ್ಲಿ 1,71,058 ಮಂದಿಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಪರ್ವನ ಸೋಂಕು ಪ್ರಕರಣಗಳ ಪೈಕಿ ಮಹಾರಾಷ್ಟ್ರ ಒಂದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಒಂದು ಕಾಣಿಸಿಕೊಳ್ಳುತ್ತಿದೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ

12.64 ಲಕ್ಷ ಸಕ್ರಿಯ ಪ್ರಕರಣ

ಮಹಾರಾಷ್ಟ್ರ-ಕರ್ನಾಟಕ, ಚತ್ತೀಸ್ಗಡ ಪಂಜಾಬ್ ಹರಿಯಾಣ ತಮಿಳುನಾಡು ಕೇರಳ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಕೊರೋನಾ ಸಂಖ್ಯೆ ಏರಿಕೆಯಾಗುತ್ತಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಸದ್ಯ ದೇಶದಲ್ಲಿ 12,64,698 ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ‌. ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ದೇಶದಲ್ಲಿ 135000 ಮಂದಿಗೆ ಸಕ್ರಿಯ ಪ್ರಕಟವಾಗಿದ್ದವು ಕೇವಲ ಎರಡು ತಿಂಗಳ ಅವಧಿಯಲ್ಲಿ 11 ಲಕ್ಷಕ್ಕೂ ಹೆಚ್ಚು ಮಂದಿಗೆ ಸಕ್ರಿಯ ಪ್ರಕರಣಗಳು ಕಾಣಿಸಿಕೊಂಡಿದೆ

10.85 ಲಸಿಕೆ

ದೇಶದಲ್ಲಿ ಒಂದು ಕಡೆ ಕೊರೋನಾ ಸೋಂಕು ಸಕ್ರಿಯ ಪ್ರಕರಣಗಳು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಪ್ರಮಾಣವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೆಚ್ಚು ಮಾಡಿದೆ.

ದೇಶದಲ್ಲಿ ಇದುವರೆಗೂ 10,85,33,085 ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ