ಕೊರೋನಾ ನಡುವೆ ಜನರಿಗೆ ಕರೆಂಟ್ ಶಾಕ್

ಬೆಂಗಳೂರು,ನ. 4- ರಾಜ್ಯದಲ್ಲಿ ಕೊರೋನಾ ಸೋಂಕಿ ನಿಂದ ತತ್ತರಿಸುವ ಜನರಿಗೆ ಇದೀಗ ವಿದ್ಯುತ್ ದರ ಹೆಚ್ಚಳದ ಮೂಲಕ ಸರ್ಕಾರ ಕರೆಂಟ್ ಶಾಕ್ ನೀಡಿದೆ.

ಪರಿಷ್ಕೃತ ದರ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಿಳಿಸಿದೆ.

ವಿದ್ಯುತ್ ದರ ಹೆಚ್ಚಳ ಮಾಡುವಂತೆ ವಿವಿಧ ಎಸ್ಕಾಂಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಅದನ್ನು ಆಧರಿಸಿ ಕೆ.ಇ ಆರ್ ಅಇ ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 40 ಪೈಸೆ ದರ ಹೆಚ್ಚಳ ಮಾಡಲಾಗಿದೆ ನವಂವರ್ 1ರಿಂದ ಜಾರಿಗೆ ಬರಲಿದೆ.ವಿದ್ಯುತ್ ದರ ಹೆಚ್ಚಳ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ .

ಬೆಸ್ಕಾಂ ಎಂ.ಡಿ ರಾಜೇಶ್ ಗೌಡ ಮಾಹಿತಿ ನೀಡಿ ನಾವು ಪ್ರತಿ ಯೂನಿಟ್ ಹೆ ಒಂದು ರೂಪಾಯಿ 96 ಹೆಚ್ಚಳ ಮಾಡಲು ಮನವಿ ಮಾಡಿದ್ದೆವು. ಆದರೆ ಪ್ರತಿ ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆದ ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಉಪ ಚುನಾವಣೆ ಮುಗಿಯುವುದನ್ನೇ ಎದುರು ನೋಡುತ್ತಿದ್ದ ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರಿಗೆ ಬರೆ ಎಳೆಯಲಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ದರ ಹೆಚ್ಚಳ ವನ್ನು ವಿದ್ಯುಚ್ಛಕ್ತಿಯ ನಿಯಂತ್ರಣ ಆಯೋಗ ಮುಂದೂಡಿತ್ತು.ಇದೀಗ ದರ ಹೆಚ್ಚಳ ಮಾಡಲಾಗಿದೆ