ಕೊರೋನಾ ತಡೆಯಲು ಗ್ರಾಮ ಪಂಚಾಯತ ಶ್ರಮಿಸಬೇಕಿದೆ: ಈಶ್ವರಪ್ಪ

ವಾಡಿ:ಮೇ.27: ಪಟ್ಟಣ ಸಮೀಪದ ಕಮರವಾಡಿ ಗ್ರಾ.ಪಂ ಕಚೇರಿಯಲ್ಲಿ ಮಂಗಳವಾರ ಗ್ರಾಮಿಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ನಡೆಸಿದ ವಿಡಿಯೋ ಸಂವಾದದ ಪ್ರದರ್ಶನ ನಡೆಯಿತು.

ಹಳಕರ್ಟಿ, ಕರದಾಳ, ಕಮರವಾಡಿ ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಪಿಡಿಓಗಳಿಗಾಗಿ ಏರ್ಪಿಡಿಸಿದ್ದ ವಿಡಿಯೋ ಸಂವಾದದಲ್ಲಿ ಗ್ರಾಮೀಣ ಭಾಗದಲ್ಲಿ ಮಹಾಮಾರಿ ಕೊರೊನಾ ಕಟ್ಟಿಹಾಕಲು ಪಂಚಾಯಿತ ಆಡಳಿತ ಶ್ರಮಿಸಬೇಕಾಗಿದೆ.

ನರೇಗಾ ಯೋಜನೆ ಗ್ರಾಮೀಣ ಜನರ ಬದುಕಿನ ಆಶ್ರಯ ಸ್ಥಂಭವಾಗಿರುವದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ, ನಲವತ್ತು ಜನರ ಎರಡು ತಂಡಗಳನ್ನು ರಚಿಸಿ ಬೆಳಿಗ್ಗೆ ಹಾಗೂ ಮದ್ಯಾಹ್ನ ವೇಳೆಯಲ್ಲಿ ಕೆಲಸ ನೀಡಬೇಕು ಎಂದು ಸಚಿವರು ವಿಡಿಯೋ ಸಂವಾದದ ಮೂಲಕ ಸೂಚಿಸಿದ್ದಾರೆ.

15ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿಗೆ ಹಾಗೂ ನೈರ್ಮಿಲ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಅಧ್ಯಕ್ಷ-ಅಭಿವೃದ್ದಿ ಅಧಿಕಾರಿಗಳು ಹಣವನ್ನು ಸಮರ್ಥವಾಗಿ ಬಳೆಸಿಕೊಳ್ಳಲು ರಾಜ್ಯ ಸರಕಾರ ತಮ್ಮಗೆ ಅನುಮತಿ ನೀಡಿದೆ. ಗ್ರಾಪಂ ಆಡಳಿತಕ್ಕೆ ಹಣಕಾಸಿನ ತೊಂದರೆ ಇದ್ದರೆ ಕ್ರೀಯಾ ಯೋಜನೆ ರೂಪಿಸಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆದರೆ ಹಣ ಬಿಡುಗಡೆಗೊಳಿಸಲಾಗುವುದು.

ಶೇ50 ರಷ್ಟು ಹಣವನ್ನು ಕುಡಿಯುವ ನೀರಿಗಾಗಿ ಹಾಗೂ ನೈರ್ಮಿಲ್ಯ ವ್ಯವಸ್ಥೆ ಸುಧಾರಣೆಗೆ ಹಣ ಬಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಬಳಿಕ ಮಾತನಾಡಿದ ಪಿಡಿಓ ಶೇಖಪ್ಪ ಶಂಕು ವಿಡಿಯೋ ಸಂವಾದದಲ್ಲಿ ನಮ್ಮ ಗ್ರಾಮೀಣ ಅಭಿವೃದ್ದಿ ಸಚಿವರು ಸೂಚಿಸಿರುವ ಪ್ರಕಾರ ನಾವು ಕಾರ್ಯ ಪ್ರವೃತ್ತರಾಗುತ್ತೇವೆ, ಅವರ ಆದೇಶದಂತೆ ಕೆಲಸ ಮಾಡಬೇಕಾಗಿದೆ. ಕಮರವಾಡಿ ಹಾಗೂ ಹಳಕರ್ಟಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕೊರೊನಾ ಕಟ್ಟಿಹಾಕಲು ನಾವು ಶಥ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕಮರವಾಡಿ ಗ್ರಾಪಂ ಅಧ್ಯಕ್ಷೆ ಸರೋಜಿನಿ ದೇಶಮುಖ, ಉಪಾಧ್ಯಕ್ಷ ಢಾಕೂ ರಾಠೋಡ, ಕಾರ್ಯದರ್ಶಿ ಬಸವರಾಜ ಗಂಜಿ, ಹಳಕರ್ಟಿ ಅಧ್ಯಕ್ಷ ಸೋಮು ಚವ್ಹಾಣ, ಅಭಿವೃದ್ಧಿ ಅಧಿಕಾರಿಗಳಾದ ಭಾರತಿ ಮಣ್ಣೂರೆ, ರಮೇಶ ಬೇಳ್ಳಿಹಾಳ, ಕರವಸೂಲಿಗಾರ ಶಿವುಪುತ್ರಪ್ಪ ಹೊಟ್ಟಿ, ಕಂಪ್ಯೂಟರ್ ಆಪರೇಟರ್ ವಿಜಯಕುಮಾರ, ಸದಸ್ಯರು ಹಾಗೂ ಗ್ರಾಪಂ ಸಿಬ್ಬಂದಿಗಳು ವಿಡಿಯೋ ಸಂವಾದದ ಪ್ರದರ್ಶನದಲ್ಲಿ ಭಾಗಿಯಾಗಿ ಮಾಹಿತಿ ತಿಳಿದುಕೊಂಡರು.