ಕೊರೋನಾ ತಡೆಯಲು ಎಲ್ಲಾರ ಸಹಕಾರ ಅಗತ್ಯ

ಗ್ರಾಮಾಂತರ ಪ್ರದೇಶದ ಜನರು ಲಸಿಕೆ ಪಡೆಯುವಂತೆ ಪ್ರೇರೆಪಿಸಿ- ಡಾ.ಸುನೀಲ್ ಸರೋದೆ
ಸಿರವಾರ.ಮಾ.೨೩- ದೇಶದಲ್ಲಿ ೨ ನೇ ಬಾರಿಗೆ ಕೊರೋನಾ ವೈರಸ್ ಹೆಚ್ಚಾಗುತ್ತಿದ್ದೂ, ಅದನ್ನು ತಡೆಯಲು ಎಲ್ಲಾರ ಸಹಕಾರ ಅಗತ್ಯವಾಗಿದೆ, ನಗರ ಪ್ರದೇಶದ ೪೫ ವರ್ಷ ಮೇಲ್ಪಟವರು ಲಸಿಕೆಯನ್ನು ಪಡೆದುಕೊಳ್ಳುತಿದ್ದಾರೆ, ಗ್ರಾಮಾಂತರ ಪ್ರದೇಶದ ಜನರು ಸಹ ಲಸಿಕೆಯನ್ನು ಪಡೆಯುವಂತೆ ನೂತನ ಚುನಾಯಿತ ಸದಸ್ಯರು ಪ್ರೇರೆಪಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ಯ ವೈದ್ಯಾಧಿಕಾರಿ ಡಾ.ಸುನೀಲ್ ಸರೋದೆ ಹೇಳಿದರು.
ಪಟ್ಟಣದ ತಾಲೂಕ ಪಂಚಾಯತಿಯ ಆವರಣದಲ್ಲಿ ಇಂದು ಬೆಳಗ್ಗೆ ತಾ.ಪಂ ಅಧ್ಯಕ್ಷ ದೇವರಾಜ ಕುರುಕುಂದಾ ಅದ್ಯಕ್ಷತೆಯಲ್ಲಿ ತಾ.ಪಂ ಸದಸ್ಯರಿಗೆ, ಗ್ರಾಮಪಂಚಾಯತಿ ನೂತನ ಅಧ್ಯಕ್ಷ-ಉಪಾದ್ಯಕ್ಷ, ಅಭಿವೃದ್ದಿ ಅಧಿಕಾರಿಗಳಿಗೆ ಕೊರೋನಾ ವೈರಸ್ ಜಾಗೃತಿ ಸಭೆಯಲ್ಲಿ ವಿಷಯ ತಿಳಿಸಿದ ಅವರು ಮಾತನಾಡಿ ಕಳೆದ ವರ್ಷ ಇದೆ ತಿಂಗಳಲ್ಲಿ ದೇಶದಲ್ಲಿ ಕೊವೀಡ್ ೧೯ ವೈರಸ್ ರೋಗ ಹೆಚ್ಚಾದಂತೆ ಲಾಕ್ ಡೌನ್ ವಿಧಿಸಲಾಗಿತು. ವೈರಸ್ ಪ್ರಮಾಣ ಕಡಿಯಾಗಿ, ಲಸಿಕೆ ಬಂದಿರುವದರಿಂದ ಲಾಕ್‌ಡೌನ್ ಸಡಿಲಿಕೆ ಮಾಡಿ ಜನ ಜೀವನ ಸಹಜ ಸ್ಥಿತಿಗೆ ಬಂದಿದೆ. ಲಸಿಕೆಯನ್ನು ೬೦ ವರ್ಷ ಮೇಲ್ಪಟವರಿಗೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ, ಶಿಕ್ಷಕರಿಗೆ, ಸರ್ಕಾರಿ ನೌಕರರಿಗೆ ನೀಡಲಾಗಿದೆ. ಈಗ ೪೫ ವರ್ಷ ಮೇಲ್ಪಟವರಿಗೆ ಈ ಲಸಿಕೆಯನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ. ಆಸ್ಪತ್ರೆಗೆ ಬರುವಾಗ ಆಹಾರ ಸೇವನೆ ಮಾಡಿ, ಆಧಾರ ಕಾರ್ಡ್, ಅಥವಾ ಮತದಾರರ ಚೀಟಿಯನ್ನು ತೆಗೆದುಕೊಂಡು ಬನ್ನಿ. ನಗರ ಪ್ರದೇಶಗಳಲ್ಲಿ ಈಗಾಗಲೇ ಅನೇಕರು ಸ್ವಯಂ ಪ್ರೇರಿತವಾಗಿ ಆಗಮಿಸಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ, ಹಳ್ಳಿಗಾಡಿನ ಜನರು ಲಸಿಕೆ ಪಡೆಯಲು ವಿಫಲರಾಗಿದ್ದಾರೆ. ಜನ ಪ್ರತಿನಿಧಿಗಳು ಗ್ರಾಮೀಣ ಭಾಗದಲ್ಲಿ ಸಭೆಗಳನ್ನು ಮಾಡಿ ಅವರಲ್ಲಿ ರೋಗದ ಲಕ್ಷಣಗಳು, ಲಸಿಕೆಯನ್ನು ಪಡೆಯುವಂತೆ ಪ್ರೇರೆಪಿಸಬೇಕು. ಲಸಿಕೆಯ ಶೇಖರಣೆ ಇದೆ, ಏಷ್ಟು ಜನರು ಬಂದರೂ ನೀಡುತ್ತೆವೆ ಎಂದರು.
ತಾ.ಪಂ ಇಓ ಉಮೇಶ ಮಾತನಾಡಿ ಗ್ರಾಮಾಂತರ ಪ್ರದೇಶದ ಜನರ ಜೊತೆ ನೇರ ಸಂಪರ್ಕದಲ್ಲಿ ಚುನಾಯಿತ ಜನಪ್ರತಿನಿಧಿಗಳು ಇರುವುದರಿಂದ ಈ ಸಭೆಯನ್ನು ಮಾಡಲಾಗಿದೆ. ಗ್ರಾಮಗಳಲ್ಲಿರುವ ಜನರು ನಿಮ್ಮ ಮಾತು ಕೇಳುತ್ತಾರೆ. ರೋಗ ಬಂದು ಗೋಳಾಡುವ ಮುಂಚೆ ಮುಂಜಾಗ್ರತೆ ತೆಗೆದುಕೊಳ್ಳಬೇಕಾಗಿದೆ. ಆರೋಗ್ಯ ಕೇಂದ್ರಗಳಿಗೆ ಆಗಮಿಸುವ ಜನರಿಗೆ ಜನಪ್ರತಿನಿಧಿಗಳು ವಾಹನದ ವ್ಯವಸ್ಥೆಯನ್ನು ಮಾಡಿದರೆ ಉಪಯೋಗವಾಗುತ್ತದೆ ಎಂದರು.
ತಾ.ಪಂ ಸದಸ್ಯರಾದ ಮಲ್ಲಿಕಾರ್ಜು ಮಲ್ಲಟ, ಪಕೀರಪ್ಪ, ನಾಗನಗೌಡ, ಪಿಡಿಓಗಳಾದ ಪ್ರಸಾದ್, ಮೊಹಿನೂದ್ದಿನ್, ಚಾಗಭಾವಿ ಗ್ರಾ.ಪಂ ಅಧ್ಯಕ್ಷ ವಿರೇಂದ್ರ, ನವಲಕಲ್ ಗ್ರಾ.ಪಂ ಅಧ್ಯಕ್ಷ ಅನಿತಾ ಶಿವರಾಜ ಸೇರಿದಂತೆ ತಾ.ಪಂ ವ್ಯಾಪ್ತಿಯ ಗ್ರಾ.ಪಂ ಅಧ್ಯಕ್ಷ-ಉಪಾದ್ಯಕ್ಷರು, ಸಿಡಿಪಿಓ ಇಲಾಖೆಯ ಲಕ್ಷ್ಮೀ, ಸೇರಿದಂತೆ ಇನ್ನಿತರು ಇದ್ದರು.