ಕೊರೋನಾ ತಡೆಗೆ ಭದ್ರೇಶ್ವರರಿಗೆ ರುದ್ರಾಭಿಷೇಕ

ಬೀದರ:ಏ.20: ಕೊರೊನ ಎರಡನೇ ಅಲೆ ದೇಶ ಮತ್ತು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೋನ ದೂರವಾಗಲಿ ಎಂದು ಇಂದು ಬಾವಗಿ ಗ್ರಾಮದ ಗುರು ಭದ್ರೆಶ್ವರ ಗದ್ದುಗೆಗೆ ಮಾಹ ರುದ್ರ ಅಭಿಷೇಕ ಸಲ್ಲಿಸಿ ಗುಂಡಯ್ಯ ಸ್ವಾಮಿ ಮಠಪತಿ ರವರು ಮಾತಾನಾಡಿದರು
ಈಗಾಗಲೇ ಗ್ರಾಮಸ್ಥರು ಹಾಗು ಗ್ರಾಮ ಪಂಚಾಯತ ಸದಸ್ಯರು ಯುವಕರು ಸೇರಿ ಬಾವಗಿ ಗ್ರಾಮ ಲಾಕ್ ಡಾನ್ ಮಾಡಲಾಗಿದೆ ಕಿರಾಣಾ ಅಂಗಡಿ ಮತ್ತು ಹೋಟಲಗಳು ಮುಚ್ಚಲಾಗಿದೆ. ಸಮಯ ನಿಗದಿ ಮಾಡಲಾಗಿದೆ ಬೆಳ್ಳಿಗೆ 6 ರಿಂದ 8 ವರೆಗೆ ಸಯಂಕಾಲ 6 ರಿಂದ 8 ವರೆಗೆ ಎಲ್ಲಾ ವಸ್ತುಗಳು ತೆಗೆದುಕೊಳ್ಳಬೇಕು ಹಿಗಾಗಿ ಜನರು ಈ ಸ್ವಯಂ ಪೇರಿತ ಲಾಕ್ ಡಾನ್ ಘೋಷಣೆಗೆ ಜನ ಸ್ಪಂದಿಸುತ್ತಿದಾರೆ. ಗ್ರಾಮದಲ್ಲಿ ಕಲವು ದಿನಗಳಿಂದ ಸುಮಾರು 6 ರಿಂದ 8 ಕೇಸ್ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ
ಈ ಸಂದರ್ಭದಲ್ಲಿ ಗುರು ಭದ್ರೆಶ್ವರ ಸಂಸ್ಥಾನದ ಆನಂದ ಸ್ವಾಮಿ ಇದ್ದರು.