ಕೊರೋನಾ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ

ಕಲಬುರಗಿ.ನ.7:ಜಿಲ್ಲಾ ಗೃಹರಕ್ಷಕದಳದಿಂದ ಕಲಬುರಗಿ ನಗರದ ಸುಪರ ಮಾರ್ಕೇಟ್‍ನಲ್ಲಿ ಕೊರೋನಾ ವೈರಸ್ (ಕೋವಿಡ್-19) ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಡಿಸಿಪಿ ಕಿಶೋರ ಬಾಬು ಅವರು ಶನಿವಾರ ಚಾಲನೆ ನೀಡಿದರು.
ಈ ಅಭಿಯಾನದ ಅಂಗವಾಗಿ ನಗರದ ಕೀರಾಣ ಬಜಾರ, ಶನಿವಾರ ಸಂತೆ,ಬಹಮನಿ ಕೋಟೆ, ಸಿಟಿ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಲಾಯಿತು. ನಂತರ ಸುಪರ ಮಾರ್ಕೇಟ್‍ದಲ್ಲಿನ ಜನತಾ ಬಜಾರದಲ್ಲಿ ಜಿಲ್ಲಾ ಗೃಹರಕ್ಷಕದಳÀ ಸಮಾದೇಷ್ಠರಾದ ಸಂತೋಷ ಪಾಟೀಲ ಸಾರ್ವಜನಿರನ್ನುದ್ದೇಸಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಠ ಮಲ್ಲಪ್ಪಾ ಲಿಂಗಣ್ಣಾ ಘಟಕಾಧಿಕಾರಿ ಪೂಜಾರಿ, ವಿಜಯ ಗೋಡಬೋಲೆ, ಚಂದ್ರಕಾಂತ ಹಾವನೂರ, ಲಕ್ಷ್ಮಣ ಎಚ್,ಬಸವರಾಜಗೌಡ, ನಾಗರಾಜ, ಸಂತೋಷ ,ರಾಮಣ್ಣ ಉಪಸ್ಥಿತರಿದ್ದರು.