ಕೊರೋನಾ ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆಃ ಸುನೀಲ್‍ಗೌಡ ಪಾಟೀಲ್

ವಿಜಯಪುರ ಜೂ.9-. ಕೊರೋನಾ ಎರಡನೇ ಅಲೆಯು ಈಗಾಗಲೇ ತನ್ನ ತೀವ್ರತೆಯನ್ನು ತೋರಿದ್ದು, ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದು, ಪರಸ್ಥಿತಿ ಕೈಮೀರಿ ಹೋಗಿದೆ ಎಂದು ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲ್‍ಗೌಡ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕೊರೋನಾ ಮೊದಲನೇ ಹಂತದಲ್ಲಿ ನಾವು ಕಲಿಯದ ಪಾಠಗಳನ್ನು ಎರಡನೇ ಅಲೆ ಸಂದರ್ಭದಲ್ಲಿ ಕಲಿಯಬೇಕಾಗಿತ್ತು. ಆದರೆ ನಾವು ನಮ್ಮ ನಿರ್ಲಕ್ಷದಿಂದ ಈ ಬಾರಿಯೂ ಮಾಸ್ಕ್ ಧರಿಸದಿರುವುದು, ಸ್ಯಾನಿಟೈಸರ್ ಬಳಸದಿರುವುದು, ಮತ್ತು ಸಾಮಾಜಿಕ ಅಂತರಗಳನ್ನು ಕಾಪಾಡದೆ ಸಂತೆ, ಮದುವೆ, ಗುಂಪು ಗೂಡುವಿಕೆ ಇತ್ಯಾದಿಗಳನ್ನು ಮುಂದುವರೆಸಿದ್ದರಿಂದ ಅದರ ಬೆಲೆಯನ್ನು ಈಗ ತೆರಬೇಕಾಗಿದೆ ಎಂದು ಸುನೀಲ್‍ಗೌಡ ಪಾಟೀಲ್ ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಕೊರೋನಾ ರೋಗಿಗಳ ಸಂಖ್ಯೆಯಿಂದ ಎಲ್ಲಿಯೂ ಸಹ ಆಸ್ಪತ್ರೆಗಳಲ್ಲಿ ಬೆಡ್‍ಗಳು ದೊರಕುತ್ತಿಲ್ಲ. ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಸಾಧ್ಯವಾಗುತ್ತಿಲ್ಲ, ರೆಮಿಡಿಶಿವಿರ್ ಇಂಜೆಕ್ಷನ್ ಲಭ್ಯವಿಲ್ಲ. ಹೀಗಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲರೂ ಹರಸಾಹಸಪಡುತ್ತಿದ್ದು ಭಗವಂತನೇ ನಮ್ಮನ್ನು ಕಾಪಾಡಬೇಕು, ಹೊರತು ಸರ್ಕಾರವಲ್ಲ. ಮುಂದಿನವಾರ ಪರಿಸ್ಥಿತಿ ಇನ್ನೂ ಹೆಚ್ಚು ಉಲ್ಬಣವಾಗುವ ಲಕ್ಷಣಗಳಿದ್ದು ಕಾರಣ ದಯವಿಟ್ಟು ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಎಂದು ಸುನೀ???ಗೌಡ ಪಾಟೀಲ್ ಕಳಕಳಿಯಿಂದ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.