ಕೊರೋನಾ ಗೆದ್ದ ಮಲೆಮಹದೇಶ್ವರ ಬೆಟ್ಟದ ಗುರುಸ್ವಾಮಿಗಳು

ಹನೂರು: ಮೇ.30: ನೇರ ನುಡಿ, ವಿವಿಧಕ್ಷೇತ್ರದ ಗಣ್ಯರ ಪ್ರೀತಿಗೆ ಪಾತ್ರವಾಗಿರುವ ಮಲೆಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಗುರುಸ್ವಾಮಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗುವ ಮೂಲಕ ಇಳಿ ವಯಸ್ಸಿನಲ್ಲೂ ಕೊರೋನಾ ಗೆದ್ದ ಸ್ವಾಮೀಜಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ವಾಮೀಜಿಗಳು ಅನೇಕ ರೀತಿಯ ಖಾಯಿಲೆಗಳಿಂದ ಬಳಲುತ್ತಿದ್ದು ಈ ಮಧ್ಯೆಕೊರೊನಾ ಮಹಾಮಾರಿ ಕೂಡ ತಗುಲಿದ ಕಾರಣ ಸ್ವಾಮೀಜಿಗಳ ಸಾವು ಬದುಕಿನ ನಡುವೆ ಹೋರಾಟ ಮಾಡುವಂತಾಗಿತ್ತು. ಹೃದಯ ಸಂಬಂಧಿಖಾಯಿಲೆಯಿಂದ ಆಂಜಿಯೋಪ್ಲಾಸ್ಟಿ ಮಾಡಿ 3 ಸ್ಟಂಟ್‍ಗಳನ್ನು ಅಳವಡಿಸಲಾಗಿತ್ತು. ಕಿಡ್ನಿ ಸಮಸ್ಯೆ, ಪಾರ್ಶುವಾಯು ಹೊಡೆತಕ್ಕೊಮ್ಮೆತುತ್ತಾಗಿದ್ದರು.ಇವುಗಳ ಜೊತೆಗೆ ವಿಪರೀತ ಮಧುಮೇಹ, ರಕ್ತದೊತ್ತಡ ಇರುವಕಾರಣ ಬದುಕುಳಿಯುವುದು ಅಸಾಧ್ಯ ಎಂದೇ ಹೇಳಲಾಗುತ್ತಿತ್ತು. ಕೆಲವು ದಿನಗಳ ಕಾಲ ಕೃತಕ ಆಮ್ಲಜನಕದ ಮೂಲಕ ಉಸಿರಾಡಬೇಕಾದ ಪರಿಸ್ಥಿತಿ ಉದ್ಭವಿಸಿತ್ತು. ಬರೊಬ್ಬರಿ 21 ದಿನಗಳ ಕಾಲ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಸದ್ಯ ಗುಣಮುಖರಾಗಿ ಮೈಸೂರಿನ ಶಾಖಾ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಯುವಕರು, ಆರೋಗ್ಯವಂತರು ಎನಿಸಿಕೊಂಡವರು ಕೂಡ ಕೊವೀಡ್‍ಗೆ ತುತ್ತಾಗಿ ಅಸುನೀಗುತ್ತಿರುವ ಕೋವಿಡ್ ವಿಷಮಯ ಪರಿಸ್ಥಿತಿಯಲ್ಲಿ ಹಿರಿಯ ಶ್ರೀಗಳು ಅನಾರೋಗ್ಯದ ನಡುವೆ ಕೊರೊನಾದಿಂದ ಗುಣಮುಖರಾಗಿರುವುದು ಪವಾಡವೇ ಸರಿ. ಶ್ರೀಗಳ ಚೇತರಿಕೆ ಇನ್ನಿತರರಿಗೆ ಸ್ಪೂರ್ತಿಯಾಗಿದೆ ಎಂದರೆ ತಪ್ಪಲ್ಲ. ಒಟ್ಟಾರೆ ಕೋವಿಡ್ ಇದೆ ಎಂದು ಭಯಪಡದೇತಾವು ನಂಬಿದದೇವರು ಮತ್ತು ತತ್ವ ಸಿದ್ದಾಂತ ಮೇಲೆ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿದರೆ ಕೊರೊನಾಗೆಲ್ಲ ಬಹುದಕ್ಕೆ ಶ್ರೀಗಳು ಸಾಕ್ಷಿಯಾಗಿದ್ದಾರೆ. ಒಟ್ಟಾರೆ ಪವಾಡಪುರುಷ ಮಲೆಮಾದಪ್ಪನ ಪುಣ್ಯಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಬಂದ ಶ್ರೀಗಳು ದೇವರ ಬಲದಿಂದಲೇ ಕೋವಿಡ್‍ನ್ನು ಸೋಲಿಸಿದ್ದಾರೆ ಎಂದು ವಿವಿಧ ಮಠಾಧೀಶರು ಮತ್ತು ಭಕ್ತಾಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.