ಕೊರೋನಾ ಕೆಲಸದ ಜೊತೆಗೆ ನಗರಸಭೆ ಸಿಬ್ಬಂದಿಗಳು ಕರ ವಸೂಲಿ

ಸಿಂಧನೂರು.ಏ.೨೯- ಕೊರೊನಾ ಸೊಂಕಿತರ ಕೆಲಸ ಮಾಡುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ನಗರಸಭೆಯ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನೂತನ ಕರ ವಸೂಲಿ ದಾಖಲಾತಿ ಕೆಲಸದಲ್ಲಿ ನಿರಂತರವಾಗಿ ತೊಡಗಿದ್ದು ಕಛೇರಿಯಲ್ಲಿ ಕಂಡುಬಂತು.
೨೦೨೧ – ೨೨ ನೇ ಸಾಲಿನ ಸರ್ಕಾರ ನೂತನ ದರ ಜಾರಿಗೆ ತಂದಿದ್ದು ಸರ್ಕಾರದ ಆದೇಶದಂತೆ ನೂತನ ಪರಿಷ್ಕರಣಾ ತೆರಿಗೆ ದರವನ್ನು ವೆಬ್ ಸೈಟ್‌ನಲ್ಲಿ ಅಳವಡಿಸುವ ಕಾರ್ಯದಲ್ಲಿ ನಗರಸಭೆಯ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೊಡಗಿದ್ದಾರೆ.
ಕೊರೊನಾ ಸೊಂಕಿತರ ಮನೆ ಮನೆಗೆ ಭೇಟಿ ನೀಡಿ ಅವರನ್ನು ಹೊಂ ಕ್ವಾರಂಟೈನ್ ಮಾಡಿ ಹೊರಗೆ ಬಾರದಂತೆ ತಿಳುವಳಿಕೆ ಹೇಳಿ ಅವರ ಮನೆಗೆ ಭೇಟಿ ನೀಡಿದ ಬಗ್ಗೆ ಫೋಟೋ ತೆಗೆಸಿಕೊಂಡು ಸಂಪೂರ್ಣ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ದಾಖಲಿಸಿಕೊಂಡು ಮೇಲಾಧಿಕಾರಿ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ಮಾಸ್ಕ ಧರಿಸಿ ,ಸಾಮಾಜಿಕ ಅಂತರ ಕಾಪಾಡುವಂತೆ ವಿನಾ ಕಾರಣ ಹೊರಗೆ ಬಾರದಂತೆ ಜನರಲ್ಲಿ ಜಾಗೃತಿ ಮೂಡಿಸಿ ಕೊರೊನಾ ತಡೆಗಟ್ಟುವಲ್ಲಿ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಶ್ರಮಿಸುತ್ತಿದ್ದು ಕೊರೊನಾ ಕೆಲಸ ಮಾಡುವ ಜೊತೆಗೆ ನೂತನ ಪರಿಷ್ಕೃತ ತೆರಿಗೆ ದರ ವೆಬ್ ಸೈಟ್‌ನಲ್ಲಿ ಅಳವಡಿಸುವ ಎರಡೆರಡು ಕೆಲಸಗಳನ್ನು ಬೇಸರವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡುತ್ತಿರುವದು ಶ್ಲಾಘನೀಯವಾಗಿದೆ.