ಕೊರೋನಾ ಎಚ್ಚರವಿರಲಿ, ಭಯ ಬೇಡ

ಈ ಸೃಷ್ಟಿಯಲ್ಲಿ ನಮ್ಮ ಸುತ್ತಮುತ್ತಲೂ ಲಕ್ಷಾಂತರ ಬ್ಯಾಕ್ಟಿರಿಯಾಗಳು ಮತ್ತು ವೈರಸ್‌ಗಳು ಇರುತ್ತವೆ. ಅದರಲ್ಲಿ ಕೊರೋನಾ ಸಾಮಾನ್ಯ ವೈರಸಗಳ ಒಂದು ಗುಂಪು.
ಇದರಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಹೀಗೆ ಹೆಸರಿಸಲಾಗಿದೆ. ಈ ವೈರಸ್‌ನಿಂದ ಸಾಮಾನ್ಯ ಶೀತ, ಜ್ವರ, ಅನೀಮಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕರೋನಾ ವೈರಸ್‌ಗಳಲ್ಲಿ ಹಲವು ವಿಧಗಳಿವೆ. ಮೆರ್ಸ್ ಮತ್ತು ಸಾರ್ಸ್. ಈ ಮಹಾಮಾರಿಯ ಅವತಾರ.
ಜಗತ್ತಿಗೆ ಒಂದು ದೊಡ್ಡ ಸವಾಲಾಗಿದೆ. ನವೆಂಬರ್‌ನಲ್ಲಿ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಈ ರೋಗ ಇಂದು ವಿಶ್ವದ ೨೧೩ ದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಬ್ಬಿದೆ. ಈ ವರ್ಷವು ಬದುಕುವ ವರ್ಷವೇ ಹೊರತು ದುಡಿಯುವ ವರ್ಷವಲ್ಲ ಎಂದು ರತನ್ ಟಾಟಾ ಅವರು ಹೇಳಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ ೬೭೫ ಕೋಟಿ ಜನರಲ್ಲಿ ಶೇಕಡಾ ೧೦ ರಷ್ಟು ಜನರಿಗೆ ಕೊರೋನಾ ಇದೆ, ಆದರೆ ಲಕ್ಷಣಗಳು ಕಾಣುತ್ತಿಲ್ಲ.
ಕೊಲ್ಲಾಪುರದ ಪ್ರಕೃತಿ ಚಿಕಿತ್ಸಾ ತಜ್ಞ ಡಾ.ಸ್ವಾಗತ್ ತೋಡಕರ್ ಅವರ ಪ್ರಕಾರ ಇದು ಒಂದು ಸಾಮಾನ್ಯ ಫ್ಲ್ಯೂ. ಪ್ರತಿವರ್ಷ ಮಳೆಗಾಲದಲ್ಲಿ ಚಿಕನ್‌ಗುನ್ಯ, ಶೀತಜ್ವರ, ಮಲೇರಿಯ, ಕಾಣಿಸಿಕೊಳ್ಳುವ ರೀತಿಯಲ್ಲಿ ಯೇಇನ್‌ಫ್ಲ್ಯುಯನ್ಜದ ಸಾಮಾನ್ಯ ಲಕ್ಷಣಗಳು ಕರೋನದಲ್ಲಿ ಕಂಡು ಬರುತ್ತವೆ. ಇದಕ್ಕೆ ಯಾವ ಔಷಧವೂ ಇಲ್ಲ. ಆದ್ದರಿಂದ ನಾವೆಲ್ಲರೂ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾಗಿದೆ.


ಡಾಕ್ಟರ್ ಸ್ವಾಗತ್ ಕಂಡು ಹಿಡಿದ ಟೋನೋ೧೬ (ಸರಕಾರದಿಂದ ಮಾನ್ಯತೆ ಪಡೆದಿದೆ) ಅನೇಕ ರೋಗಿಗಳಿಗೆ ವರದಾನವಾಗಿದೆ. ಬಾಬಾ ರಾಮದೇವ್ ಅವರ ಪತಂಜಲಿ ಔಷಧಗಳಿಗೆ ಆಯೂಷ್ ಮಂತ್ರಾಲಯವು ಮಾನ್ಯತೆ ನೀಡಿದೆ. ಪುತ್ತೂರಿನ ಕಬಕದ ನಿವಾಸಿ ಆಯುರ್ವೇದ ತಜ್ಞರಾದ ಗಿರಿಧರ ಕಜೆಯವರು ಕೊರೋನಗೆ ಔಷಧಿಯನ್ನು ಬಿಡುಗಡೆ ಮಾಡಲಾಗಿಲ್ಲ. ಇದರ ಹಿಂದೆ ಮಾಫಿಯಾ ಶಕ್ತಿ ಇದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಜೈವಿಕ ನಾವೀನ್ಯತೆ ಕೇಂದ್ರದಿಂದ ಕರೋನ ವಿರುದ್ಧ ಹೋರಾಡಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ೮ ಉತ್ಪನ್ನಗಳನ್ನು ಇತ್ತೀಚೆಗೆ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ಅವರು ಲೋಕಾರ್ಪಣೆ ಮಾಡಿದ್ದಾರೆ.
ಫರಿದಾಬಾದ್‌ನ ಸಕ್ಕರೆ ಕಾಯಿಲೆ ತಜ್ಞ ಡಾ. ಬಿಸ್ವರೂಪ್‌ರಾಯ್ ಚೌಧರಿ ಹೇಳುವ ಪ್ರಕಾರ ಇದು ಭಯದಿಂದ ಹಣ ವಸೂಲಿ ಮಾಡುವ ಧಂದೆಯಾಗಿದೆ. ಇದರಲ್ಲಿ ವೈದ್ಯರು, ಔಷಧ ತಯಾರಕರು ಮತ್ತು ಶಾಮೀಲಾಗಿದ್ದಾರೆ. ಪ್ರತಿವರ್ಷ ನಮ್ಮ ದೇಶದಲ್ಲಿ ಇನ್‌ಫ್ಲ್ಯೂಯಂಜಾದಿಂದ ಸುಮಾರು೬ ಲಕ್ಷ ಜನರು ಸಾಯುತ್ತಿದ್ದಾರೆ.
ಸಕ್ಕರೆ ಕಾಯಿಲೆ, ಹೃದಯರೋಗ, ರಕ್ತದೊತ್ತಡ, ಮಲೇರಿಯ ಮುಂತಾದ ಕಾಯಿಲೆಗಳಲ್ಲಿ ಸಾಯುವವರಿಗಿಂತ ಕರೋನಗೆ ಒಳಗಾಗಿ ಸಾಯುವವರ ಸಂಖ್ಯೆಯು ಬಹಳ ಕಡಿಮೆ ಇದೆ. ಕರೋನ ಸಾಮಾನ್ಯವಾಗಿ ಬಂದು ಹೋಗುವ ಕಾಯಲೆಯಾಗಿದ್ದು ರೋಗ ನಿರೋಧಕ ಶಕ್ತಿ ಜಾಸ್ತಿ ಇರುವರು ಯಾವುದೇ ಔಷಧವಿಲ್ಲದೇ ಗುಣಮುಖರಾಗುತ್ತಾರೆ. ಟಿ.ವಿ. ಚಾನೆಲ್‌ಗಳು, ಸಾಮಾಜಿಕ ಮಾಧ್ಯಮಗಳು, ಮೀಡಿಯಾ ಮತ್ತು ಅನೇಕ ಪತ್ರಿಕೆಗಳ ಮುಖಾಂತರ ಭಯ ಹುಟ್ಟಿಸಲಾಗುತ್ತಿದೆ. ದಿನನಿತ್ಯ ಕೋರೋನಾ ಭಯದಿಂದ ಸಾಯುವ ಪ್ರಮಾಣ ಜಾಸ್ತಿ ಆಗುತ್ತಾ ಇದೆ. ಎಡ್ಸ್ ಕಾಯಿಲೆಗೂ ಸಹ ಇನ್ನು ವರೆಗೆ ಯಾವುದೇ ಔಷಧ ಇಲ್ಲ.
ಭಯ ಬೇಡ ನಿರ್ಭಯವಾಗಿರಿ, ಕೋರೋನಾ ವಿರುದ್ಧ ಹೋರಾಡಿ, ಆದರೆ ರೋಗಿಯೊಂದಿಗೆ ಹೋರಾಡಬೇಡಿ. ಆತ್ಮಬಲವನ್ನು ವೃದ್ಧಿಮಾಡಿಕೊಳ್ಳಲು ಸಕಾರಾತ್ಮಕ ಚಿಂತನೆ ಮಾಡಿ, ಚಿಂತೆ ಬೇಡ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಲವಂಗ, ಚಕ್ಕಿ, ಶುಂಠಿ, ಕಾಳುಮೆಣಸು, ತುಳಸಿ, ಜೀರಿಗೆ, ದನಿಯಾ, ಇತರೆ ಮಸಾಲೆ ಪದಾರ್ಥಗಳಿಂದ ಮಾಡಿದ ಕಷಾಯವನ್ನು ದಿನಕ್ಕೆ ೨-೩ ಸಾರಿ ಕುಡಿಯಿರಿ. ಬಿಸಿ ನೀರು ಮತ್ತು ಉಗಿಯಿಂದ ಗಂಟಲು ಮತ್ತು ಮೂಗನ್ನು ಸ್ವಚ್ಛ ಮಾಡಿ. ಸಾಬೂನಿನಿಂದ ಕೈಗಳನ್ನು ತೊಳೆಯುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಇತರೆ ಸರ್ಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗಿದೆ.
ಕೊರೋನಾ ವೈರಾಣುಗಳು ಸಮುಯಕ್ಕೆ ತಕ್ಕಂತೆ ತಮ್ಮ ರೂಪಗಳನ್ನು ಬದಲಾಯಿಸಿಕೊಳ್ಳುತ್ತಿವೆ, ಹಾಗಾಗಿ ಯಾವುದೇ ಪ್ರಕಾರದ ಲಸಿಕೆಗಳು ಲಭ್ಯವಿಲ್ಲ. ಅದರ ಲಕ್ಷಣಗಳನ್ನು ನೋಡಿ ಡಾಕ್ಟರ್‍ಗಳು ಚಿಕಿತ್ಸೆ ನೀಡುತ್ತಿದ್ದಾರೆ. ಹಿಂದಿನ ಕೆಲವು ವರ್ಷಗಳಿಂದ ಹೊಸ ರೋಗಗಳು ಮಾನವ ಜೀವನ ಹಾಳು ಮಾಡಿವೆ. ಎಬೋಲಾ, ಝೀಕಾ, ಡೆಂಗ್ಯೂ, ಚಿಕೂನ್‌ಗುನ್ಯ, ಏಡ್ಸ್ ಹಕ್ಕಿಜ್ವರ, ನ್ಯೂಮೋನಿಯಇಂತಹ ಅನೇಕ ಕಾಯಿಲೆಗಳಿಂದ ಮನುಷ್ಯಾತ್ಮರಿಂದ ತತ್ತರಿಸಿ ಹೋಗಿದ್ದಾನೆ.
ಕಾಯಿಲೆಗಳ ಪ್ರಚಂಡ ರೂಪವನ್ನು ನೋಡಿ ಭಯಭೀತನಾಗಿದ್ದಾನೆ. ಈ ಸಂದರ್ಭದಲ್ಲಿ ಕೃಷ್ಣನ ಕಥೆ ನೆನಪಿಗೆ ಬರುತ್ತದೆ. ಶ್ರೀಕೃಷ್ಣನು ಸದಾ ಮೃತ್ಯುವಿನ ನೆರಳಿನಲ್ಲಿ ತನ್ನ ಜೀವನ ಕಳೆದನು. ಜನ್ಮ ತಾಳುವ ಮುನ್ನ ಅವನನ್ನು ಕೊಂದು ಹಾಕಲು ಕಂಸನು ಯೋಜನೆ ರೂಪಿಸುತ್ತಿರುತ್ತಾನೆ. ಅವನ ಜನ್ಮವು ಜೈಲಿನಲ್ಲಿ ಆಗುತ್ತದೆ. ಶ್ರೀಕೃಷ್ಣನ ಅಂತ್ಯವೂ ಸಹ ದು:ಖಮಯವಾಗಿದೆ. ಜರನೆಂಬ ಬೇಟೆಗಾರನ ಬಾಣದಿಂದ ಹತನಾದನು.
ನಾವು ಸಹ ಅಜ್ಞಾನದ ಜೈಲಿನಲ್ಲಿ ಹುಟ್ಟಿದ್ದೇವೆ. ಅಲ್ಲಿಂದ ನಮ್ಮ ಪಯಣ ಜ್ಞಾನದ ಕಡೆ ಆಗುತ್ತದೆ. ನಾವು ತಾಯಿಯ ಗರ್ಭದಲ್ಲಿದ್ದಾಗ ನಮ್ಮನ್ನು ಕೊಲ್ಲಲು ಅನೇಕ ವೈರಾಣುಗಳು ಮತ್ತು ರೋಗಾಣುಗಳು ಕಾಯುತ್ತಲೇ ಇರುತ್ತವೆ. ಸಾವು ನಮ್ಮನ್ನು ೯ ತಿಂಗಳ ವರೆಗೆ ಕಾಯುತ್ತಿರುತ್ತದೆ. ಶ್ರೀಕೃಷ್ಣನು ಹುಟ್ಟಿದ ತಕ್ಷಣ ಅವನನ್ನು ಕೊಂದು ಹಾಕುವ ಪ್ರಯತ್ನ ನಡೆಯಿತು. ಜೈಲಿನಿಂದ ಹೊರಬಂದಾಗ ಯಮುನಾ ನದಿಯ ನೀರಿನ ಸೆಳೆತ ಅವನನ್ನು ಏನು ಮಾಡಲಿಲ್ಲ. ನೆರೆಹಾವಳಿ, ಭೂಕಂಪ ಅಪಘಾತ, ಬರಗಾಲ ಮುಂತಾದ ಅನೇಕ ಪರಿಸ್ಥಿತಿಗಳಿಂದ ನಾವು ಸುರಕ್ಷಿತವಾಗಬೇಕಾಗಿದೆ.
ಶ್ರೀಕೃಷ್ಣನಿಗೆ ಪೂತನಿಯು ತನ್ನ ವಿಷಭರಿತ ಎದೆ ಹಾಲನ್ನು ಕುಡಿಸಿ ಕೊಲ್ಲಲು ಪ್ರಯತ್ನ ಮಾಡುತ್ತಾಳೆ. ನಮಗೂ ಸಹ ಈ ಜೀವನದಲ್ಲಿ ಅನೇಕ ವಿಷಭರಿತ ಆಹಾರ ಪದಾರ್ಥಗಳು ಸಾಯಿಸಲು ಪ್ರಯತ್ನ ನಡೆಸುತ್ತವೆ. ಕೃಷ್ಣ ಕಾಳಿಯ ಮರ್ದನ ಮಾಡಿದಂತೆ ನಾವು ಪೊಲಿಯೋ, ಮಲೇರಿಯಾ ಮುಂತಾದ ಅನೇಕ ಕಾಯಿಲೆಗಳ ಜೊತೆಗೆ ಹೋರಾಡಿದ್ದೇವೆ. ಶ್ರೀಕೃಷ್ಣನು ಮುಂದೆ ಬಕಾಸುರ, ಅಕಾಸುರ, ತೃಣಾವರ್ತ ಮುಂತಾದ ರಾಕ್ಷಸರ ಜೊತೆ ಹೋರಾಡಬೇಕಾಯಿತು. ನಾವೂ ಕ್ಯಾನ್ಸರ್, ಹೃದಯ-ರೋಗ, ಸಕ್ಕರೆ ಕಾಯಿಲೆ ಟ್ಯೂಮರ್ ಮುಂತಾದ ಕಾಯಿಲೆಗಳಿಂದ ರಕ್ಷಣೆಯನ್ನು ಹೊಂದಬೇಕಾಗಿದೆ.
ಶ್ರೀಕೃಷ್ಣನು ಶಕ್ತಿಗಿಂತ ಯುಕ್ತಿ ಮೇಲು ಎಂದು ತೋರಿಸಿಕೊಟ್ಟಿದ್ದಾನೆ. ಇದೇ ರೀತಿ ನಾವು ಸಹ ಯುಕ್ತಿಯಿಂದ ಜೀವನ ನಡೆಸಬೇಕಾಗಿದೆ. ಕರೋನದಂತಹ ಭಯಂಕರ ಕಾಯಿಲೆಗಳಿಂದ ಭಯಪಡದೇ ರಕ್ಷಿಸಿಕೊಳ್ಳಬೇಕಾಗಿದೆ. ಮೃತ್ಯುಆಟವಾಗಿದೆ, ಆದರೆ ಜೀವನ ತುಂ ಸುಂದರವಾಗಿದೆ. ಮೃತ್ಯುವಿನ ಮುಂದೆ ಯಾವುದೇ ಪದವಿ, ಶಿಕ್ಷಣ ವಯಸ್ಸು, ಶ್ರೀಮಂತಿಕೆ ಮುಖ್ಯವಲ್ಲ. ಕರೋನಾ ದಕಷ್ಟ-ಕಾಲದಲ್ಲಿ ನಾವು ನಮ್ಮನ್ನು ಭಗವಂತನ ಕೃಪೆಯಿಂದ ರಕ್ಷಿಸಿಕೊಳ್ಳೋಣ. ಅವನ ಸಾನಿಧ್ಯದಿಂದ ಜೀವನ ಸುಖಮಯ ಮಾಡಿಕೊಳ್ಳೋಣ.
ಇತ್ತೀಚೆಗೆ ಬ್ರಹ್ಮಾಕುಮಾರಿ ಸಂಸ್ಥೆಯ ಮುಖ್ಯಾಲಯದ ಶಾಂತಿವನದಲ್ಲಿ ೧೫ ದಿನಗಳ ಕಾಲ ಲಾಕ್‌ಡೌನ್ ಮಾಡಲಾಯಿತು. ಹಿಂದಿನ ತಿಂಗಳು ೨೧೭ ಜನರಿಗೆ ಕರೋನ ಕಾಣಿಸಿಕೊಂಡಿತು. ಅವರನ್ನು ಸಂಸ್ಥೆಯ ’ಮಾನಸ ಸರೋವರ ಎಂಬ ರಿಟ್ರೀಟ್ ಸೆಂಟರ್‍ನ ’ಐಸೋಲೇಶನ್ ಕೇಂದ್ರ’ದಲ್ಲಿ ಸೇರಿಸಲಾಯಿತು. ಕೇವಲ ೩ ರಿಂದ ೭ ದಿನಗಳಲ್ಲಿ ಕೊರೋನದಿಂದ ಗುಣಮುಖರಾಗಿ ವಾಪಸ್ಸು ಶಾಂತಿವನಕ್ಕೆ ತೆರಳಿದರು.
ಹಿರಿಯ ವೈದ್ಯಾಧಿಕಾರಿಗಳ ಪ್ರಕಾರ ಬೇಗ ಗುಣಮುಖರಾಗಲು ಅಲ್ಲಿರುವ ಆಧ್ಯಾತ್ಮಿಕ ಜ್ಞಾನ, ಪ್ರಾಣಾಯಾಮ, ರಾಜಯೋಗ ಧ್ಯಾನ, ಸಾತ್ವಿಕ ಆಹಾರವೇ ಕಾರಣವಾಗಿದೆ.
ಮನೋವಿಜ್ಞಾನಿಗಳ ಪ್ರಕಾರ ಯಾವುದೇ ವಿಚಾರವನ್ನು ಬಾರಿ-ಬಾರಿಗೂ ಮಾಡಿದರೆ ಅದರ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಕರೋನ ಬಗೆ ಇರುವ ವಿಚಾರಗಳನ್ನು ಬಿಟ್ಟು, ಆರೋಗ್ಯವಂತರಾಗಲು ಸುವಿಚಾರ, ಧ್ಯಾನ, ಯೋಗಾಸನ, ವ್ಯಾಯಾಮ, ಶುದ್ಧ ಆಹಾರ ಮತ್ತು ವಿಹಾರದ ಅವಶ್ಯಕತೆ ಇದೆ. ಸರ್ವರರಕ್ಷಕನಾದ ಪರಮಾತ್ಮನ ಅತಿ ಶ್ರ್ರೇಷ್ಠ ಸಂತಾನರಾದ ನಾವುಗಳು ಅವನಿಂದ ಸರ್ವಶಕ್ತಿಗಳನ್ನು ಪಡೆದು ಅನುಭವ ಮಾಡಬೇಕಾಗಿದೆ. ದಿನಕ್ಕೆ ೩-೪ ಬಾರಿ ಮನಸ್ಸಿನಲ್ಲಿ ಈ ಶ್ರೇಷ್ಠ ವಿಚಾರಗಳನ್ನು ಮಾಡಿದರೆ ನಮ್ಮ ರಕ್ಷಣೆಯೊಂದಿಗೆ ವಿಶ್ವದರಕ್ಷಣೆಯೂ ಸಹ ಆಗುವುದು-
“ನಾನು ಆರೋಗ್ಯವಂತನಾಗಿದ್ದೇನೆ, ನನ್ನ ಪರಿವಾರ ಆರೋಗ್ಯವಾಗಿದೆ, ನನ್ನ ಮನೆ ನಿರೋಗಿಯಾಗಿದೆ, ನನ್ನಓಣಿ, ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತು ಸುದೃಢವಾಗಿದೆ. ಪರಮಾತ್ಮನ ರಕ್ಷಣೆ-ಕವಚದಲ್ಲಿ ನಾವುಗಳು ನಿರ್ಭಯ, ಸುಖಿ, ಆರೋಗ್ಯವಂತರಾಗಿದ್ದೇವೆ.”
ಸರ್ವೇಜನ: ಸುಖಿನೋಭವಂತು

-ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,