ಕೊರೋನಾ ಇಂದು 970ಜನರಿಗೆ ಸೋಂಕು, 3 ಸಾವು

ಬೆಂಗಳೂರು, ಜ.8- ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಇಳಿಕೆ ಕಂಡಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಇಬ್ಬರು ಮತ್ತು ಶಿವಮೊಗ್ಗದಲ್ಲಿ ಒಬ್ಬ ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿರುವುದನ್ನು ಹೊರತುಪಡಿಸಿ ಉಳಿದ ಯಾವುದೇ ಜಿಲ್ಲೆಗಳಲ್ಲಿ ಸಾವು ವರದಿಯಾಗಿಲ್ಲ
ರಾಜಧಾನಿ ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ.
,ಇಂದು ರಾಜ್ಯದಲ್ಲಿ 970ಜನರಿಗೆ ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ657ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ ಮೂವರು ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 925868ಕ್ಕೆ ಏರಿದೆ. ಇವರಲ್ಲಿ904286ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 9429ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12134ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 203 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 479 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು240 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ 02ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 391663ಕ್ಕೆ ಏರಿದೆ. ಇದುವರೆಗೂ 381460 ಜನ ಗುಣಮುಖರಾಗಿದ್ದಾರೆ. 5859 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4343ಜನ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 05 ಬಳ್ಳಾರಿ 21ಬೆಳಗಾವಿ27ಬೆಂಗಳೂರು ಗ್ರಾಮಾಂತರ 26ಬೀದರ್‌ 07ಚಾಮರಾಜನಗರ 06 ಚಿಕ್ಕಬಳ್ಳಾಪುರ 08 ಚಿಕ್ಕಮಗಳೂರು 14 ಚಿತ್ರದುರ್ಗ 10ದಕ್ಷಿಣ ಕನ್ನಡ 62 ದಾವಣಗೆರೆ 16, ಧಾರವಾಡ 14 ಗದಗದಲ್ಲಿ 06ಹಾಸನದಲ್ಲಿ 15 ಹಾವೇರಿ 00 ಕಲಬುರಗಿ 35 ಕೊಡಗು14, ಕೋಲಾರ 18 ಕೊಪ್ಪಳ 05ಮಂಡ್ಯ 26ಮೈಸೂರು45 ರಾಯಚೂರು 07 ರಾಮನಗರ 05 ಶಿವಮೊಗ್ಗ 17 ತುಮಕೂರು 39 ಉಡುಪಿ 16 ಉತ್ತರ ಕನ್ನಡ 18 ವಿಜಯಪುರ 06 ಹಾಗೂ ಯಾದಗಿರಿಯಲ್ಲಿ 03ಪ್ರಕರಣಗಳು ಪತ್ತೆಯಾಗಿವೆ.