ಕೊರೋನಾ ಇಂದು 600 ಜನರಿಗೆ ಸೋಂಕು, 3 ಸಾವು

ಬೆಂಗಳೂರು, ಜ. 4- ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಗಣನೀಯ ಇಳಿಕೆ ಕಂಡಿದೆ.
ಗುಣಮುಖರಾಗುವ ಸಂಖ್ಯೆಯೂ ಹೆಚ್ಚಿದೆ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಬೆಂಗಳೂರು ಉಡುಪಿ ಬಿಜಾಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದು ಉಳಿದ ಜಿಲ್ಲೆಗಳಲ್ಲಿ ಇಂದು ಕೊರೋನ ಸಾವು ಪ್ರಕರಣಗಳು ಸಂಭವಿಸಿಲ್ಲ.
ರಾಜಧಾನಿ ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಭಾರೀ ಇಳಿಕೆಯಾಗಿದೆ.
ಇಂದು ರಾಜ್ಯದಲ್ಲಿ 600ಜನರಿಗೆ ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ1283 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ ಮೂವರು ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 922538ಕ್ಕೆ ಏರಿದೆ. ಇವರಲ್ಲಿ900202ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 10207ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12110ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 196 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 298 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು728 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 389955ಕ್ಕೆ ಏರಿದೆ. ಇದುವರೆಗೂ 378936 ಜನ ಗುಣಮುಖರಾಗಿದ್ದಾರೆ. 6691 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4327ಜನ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 01 ಬಳ್ಳಾರಿ 15ಬೆಳಗಾವಿ13 ಬೆಂಗಳೂರು ಗ್ರಾಮಾಂತರ 10 ಬೀದರ್‌ 09ಚಾಮರಾಜನಗರ 05 ಚಿಕ್ಕಬಳ್ಳಾಪುರ 19 ಚಿಕ್ಕಮಗಳೂರು 07 ಚಿತ್ರದುರ್ಗ 37ದಕ್ಷಿಣ ಕನ್ನಡ 16 ದಾವಣಗೆರೆ 02, ಧಾರವಾಡ 15 ಗದಗದಲ್ಲಿ 02ಹಾಸನದಲ್ಲಿ 27 ಹಾವೇರಿ 00 ಕಲಬುರಗಿ 18 ಕೊಡಗು02, ಕೋಲಾರ 11 ಕೊಪ್ಪಳ 02ಮಂಡ್ಯ 09ಮೈಸೂರು20 ರಾಯಚೂರು 08 ರಾಮನಗರ 01 ಶಿವಮೊಗ್ಗ 04 ತುಮಕೂರು 08 ಉಡುಪಿ 09 ಉತ್ತರ ಕನ್ನಡ 12 ವಿಜಯಪುರ 11 ಹಾಗೂ ಯಾದಗಿರಿಯಲ್ಲಿ 09ಪ್ರಕರಣಗಳು ಪತ್ತೆಯಾಗಿವೆ.