ಕೊರೋನಾ ಇಂದು ದಾಖಲೆಯ ಇಳಿಕೆ

ಬೆಂಗಳೂರು ನ. 9- ರಾಜ್ಯದಲ್ಲಿ ಕರೋನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದ್ದು ಇಂದು ಭಾರಿ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಇಳಿಮುಖವಾಗಿವೆ ಹಾಗೆಯೇ ಸಾವಿನ ಸಂಖ್ಯೆ ಕೂಡ ಗಣನೀಯವಾಗಿ ಇಳಿಕೆಯಾಗಿದೆ ಗುಣಮುಖರಾಗುವ ಸಂಖ್ಯೆಯು ಹೆಚ್ಚಾಗಿದೆ.


ಕಳೆದ 20 ದಿನಗಳಿಂದ ಸತತವಾಗಿಸೊಂಕು ಪ್ರಕರಣ ಇಳಿಕೆ ಆಗುತ್ತಿದೆ ಚೇತರಿಕೆ ಪ್ರಕರಣಗಳು ಏರಿಕೆ ಕಂಡಿವೆ.ಇಂದು ರಾಜ್ಯದಲ್ಲಿ ಸೋಂಕು ಪ್ರಕರಣಗಳುಎರಡು ಸಾವಿರಕ್ಕಿಂತ ಕಡಿಮೆಯಾಗಿದೆ ರಾಜಧಾನಿ ಬೆಂಗಳೂರಿನಲ್ಲಿದಾಖಲೆ ಎಂಬಂತೆ ಪ್ರಕರಣಗಳು ಸಾವಿರಕ್ಕಿಂತ ಕಡಿಮೆಯಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸೋಂಕು ಇಳಿಕೆಯಾಗಿ ಕರೋನಾ ನಿಯಂತ್ರಣಕ್ಕೆ ಬಂದಂತಾಗಿದೆ. ಸೋಂಕು ಇಳಿಕೆ ಆಗುತ್ತಿರುವುದು ಜನರಲ್ಲಿ ಸೋಂಕಿನ ಭೀತಿಯನ್ನು ಕಡಿಮೆ ಮಾಡಿ ಸ್ವಲ್ಪಮಟ್ಟಿಗೆ ನಿರಾಳತೆ ತಂದಿದೆ
ಕಳೆದ ಕೆಲ ತಿಂಗಳಿಂದ ಏರುಮುಖವಾಗಿದ್ದ ಸೋಂಕು ಪ್ರಕರಣಗಳು ಇಂದು ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಇಳಿಕೆ ಯಾಗಿ ಜನ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ
ಇಂದು ರಾಜ್ಯದಲ್ಲಿ 1963 ಜನರಿಗೆಸೊಂಕು ದೃಢ ಪಟ್ಟಿದೆ ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು 2686 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 19 ಸೋಂಕಿತರು ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ848850 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು804485 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 32936ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11410ಜನ ಸಾವಿಗೀಡಾಗಿದ್ದಾರೆ.ರಾಜ್ಯದಲ್ಲಿ 876 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 978 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 350305ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 05ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3961ಕ್ಕೆ ಏರಿಕೆಯಾಗಿದೆ. ಇಂದು959ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು18395 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 22ಬಳ್ಳಾರಿ 37 ಬೆಳಗಾವಿ34ಬೆಂಗಳೂರು ಗ್ರಾಮಾಂತರ 93ಬೀದರ್03 ಚಾಮರಾಜನಗರ 12 ಚಿಕ್ಕಬಳ್ಳಾಪುರ 56 ಚಿಕ್ಕಮಗಳೂರು 07ಚಿತ್ರದುರ್ಗ 69ದಕ್ಷಿಣ ಕನ್ನಡ 18ದಾವಣಗೆರೆ 19ಧಾರವಾಡ 33 ಗದಗ 04ಹಾಸನ 48ಹಾವೇರಿ 13 ಕಲಬುರಗಿ 34ಕೊಡಗು 14ಕೋಲಾರ 52ಕೊಪ್ಪಳ 16ಮಂಡ್ಯ 73ಮೈಸೂರು 95ರಾಯಚೂರು 20ರಾಮನಗರ 03ಶಿವಮೊಗ್ಗ 28ತುಮಕೂರು 65ಉಡುಪಿ 29ಉತ್ತರ ಕನ್ನಡ 47ವಿಜಯಪುರ 38ಯಾದಗಿರಿ 03