ಕೊರೋನಾ ಇಂದು ತುಸು ಏರಿಕೆ

ಬೆಂಗಳೂರು ನ. 18- ಕೆಲ ದಿನಗಳಿಂದರಾಜ್ಯದಲ್ಲಿ ಕರೋನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿರುವಾಗಲೇ ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆ ತುಸು ಏರಿಕೆಯಾಗುತ್ತಿದೆ ಇಂದು ಸೋಂಕು ಪ್ರಕರಣಗಳು ನೆನ್ನೆಗಿಂತ ಕೊಂಚ ಏರಿಕೆ ಯಾಗಿದೆ. ಇಂದು ರಾಜ್ಯದಲ್ಲಿ 1791 ಜನರಿಗೆಸೊಂಕು ದೃಢ ಪಟ್ಟಿದೆ.


ಇಂದು1947ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 21 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ865931ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು829188ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 25146ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11578ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 636ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 933ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 359539ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 10ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4028ಕ್ಕೆ ಏರಿಕೆಯಾಗಿದೆ. ಇಂದು 927ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17703 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 14ಬಳ್ಳಾರಿ 18 ಬೆಳಗಾವಿ32ಬೆಂಗಳೂರು ಗ್ರಾಮಾಂತರ 33ಬೀದರ್07 ಚಾಮರಾಜನಗರ 04 ಚಿಕ್ಕಬಳ್ಳಾಪುರ 14 ಚಿಕ್ಕಮಗಳೂರು 08ಚಿತ್ರದುರ್ಗ 44ದಕ್ಷಿಣ ಕನ್ನಡ 45ದಾವಣಗೆರೆ 16ಧಾರವಾಡ 14 ಗದಗ 12ಹಾಸನ 71ಹಾವೇರಿ 05 ಕಲಬುರಗಿ 15ಕೊಡಗು 13ಕೋಲಾರ 21ಕೊಪ್ಪಳ 01 ಮಂಡ್ಯ 56ಮೈಸೂರು 97ರಾಯಚೂರು 08ರಾಮನಗರ 10ಶಿವಮೊಗ್ಗ 17ತುಮಕೂರು 86ಉಡುಪಿ 33ಉತ್ತರ ಕನ್ನಡ 31ವಿಜಯಪುರ 121ಯಾದಗಿರಿ 12