ಕೊರೋನಾ ಇಂದು ಗಣನೀಯ ಇಳಿಕೆ

ಬೆಂಗಳೂರು ನ. 12-ರಾಜ್ಯದಲ್ಲಿ ಕರೋನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದ್ದು ಇಂದು ಗಣನೀಯವಾಗಿ ಸೋಂಕು ಪ್ರಕರಣಗಳು ಇಳಿಮುಖವಾಗಿವೆ ಹಾಗೆಯೇ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದೆ ಗುಣಮುಖರಾಗುವ ಸಂಖ್ಯೆಯು ಹೆಚ್ಚಾಗಿದೆ.
ಕಳೆದ22 ದಿನಗಳಿಂದ ಸತತವಾಗಿಸೊಂಕು ಪ್ರಕರಣ ಇಳಿಕೆ ಆಗುತ್ತಿದೆ ಚೇತರಿಕೆ ಪ್ರಕರಣಗಳು ಏರಿಕೆ ಕಂಡಿವೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರಕರಣಗಳು ಕಡಿಮೆಯಾಗಿದೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸೋಂಕು ಇಳಿಕೆಯಾಗಿ ಕರೋನಾ ನಿಯಂತ್ರಣಕ್ಕೆ ಬಂದಂತಾಗಿದೆ .ಸೋಂಕು ಇಳಿಕೆ ಆಗುತ್ತಿರುವುದು ಜನರಲ್ಲಿ ಸೋಂಕಿನ ಭೀತಿಯನ್ನು ಕಡಿಮೆ ಮಾಡಿ ಸ್ವಲ್ಪಮಟ್ಟಿಗೆ ನಿರಾಳತೆ ತಂದಿದೆ.

ಇಂದು ರಾಜ್ಯದಲ್ಲಿ 2116 ಜನರಿಗೆಸೊಂಕು ದೃಢ ಪಟ್ಟಿದೆ .ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು 3368 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 21 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ855912 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು814949 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 29470ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11474ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 797ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1069ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 354215ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 08ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3985ಕ್ಕೆ ಏರಿಕೆಯಾಗಿದೆ. ಇಂದು991ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17942 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 14ಬಳ್ಳಾರಿ 41 ಬೆಳಗಾವಿ54ಬೆಂಗಳೂರು ಗ್ರಾಮಾಂತರ 43ಬೀದರ್03 ಚಾಮರಾಜನಗರ 12 ಚಿಕ್ಕಬಳ್ಳಾಪುರ 24 ಚಿಕ್ಕಮಗಳೂರು 37ಚಿತ್ರದುರ್ಗ 41ದಕ್ಷಿಣ ಕನ್ನಡ 53ದಾವಣಗೆರೆ 29ಧಾರವಾಡ 18 ಗದಗ 05ಹಾಸನ 100ಹಾವೇರಿ 06 ಕಲಬುರಗಿ 51ಕೊಡಗು 08ಕೋಲಾರ 18ಕೊಪ್ಪಳ 28ಮಂಡ್ಯ 74ಮೈಸೂರು 115ರಾಯಚೂರು 09ರಾಮನಗರ 12ಶಿವಮೊಗ್ಗ 51ತುಮಕೂರು 80ಉಡುಪಿ 31ಉತ್ತರ ಕನ್ನಡ 32ವಿಜಯಪುರ 51ಯಾದಗಿರಿ 07