ಕೊರೋನಾ ಇಂದು ಕೊಂಚ ಏರಿಕೆ

ಬೆಂಗಳೂರು ನ. 17-ಕೆಲ ದಿನಗಳಿಂದರಾಜ್ಯದಲ್ಲಿ ಕರೋನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದ್ದು ಇಂದು ಸೋಂಕು ಪ್ರಕರಣಗಳು ನೆನ್ನೆಗಿಂತ ಕೊಂಚ ಏರಿಕೆ ಯಾಗಿದೆ. ಇಂದು ರಾಜ್ಯದಲ್ಲಿ 1336 ಜನರಿಗೆಸೊಂಕು ದೃಢ ಪಟ್ಟಿದೆ.


ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು2100 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 16 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ864140ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು827241ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 25323ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11557ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 693ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 729ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 358606ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 09ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 4018ಕ್ಕೆ ಏರಿಕೆಯಾಗಿದೆ.bಇಂದು942ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17707 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 24ಬಳ್ಳಾರಿ 15 ಬೆಳಗಾವಿ09ಬೆಂಗಳೂರು ಗ್ರಾಮಾಂತರ 40ಬೀದರ್17 ಚಾಮರಾಜನಗರ 07 ಚಿಕ್ಕಬಳ್ಳಾಪುರ 21 ಚಿಕ್ಕಮಗಳೂರು 29ಚಿತ್ರದುರ್ಗ 13ದಕ್ಷಿಣ ಕನ್ನಡ 30ದಾವಣಗೆರೆ 24ಧಾರವಾಡ 05 ಗದಗ 03ಹಾಸನ 30ಹಾವೇರಿ 04 ಕಲಬುರಗಿ 14ಕೊಡಗು 08ಕೋಲಾರ 09ಕೊಪ್ಪಳ 17 ಮಂಡ್ಯ 38ಮೈಸೂರು 52ರಾಯಚೂರು 14ರಾಮನಗರ 09ಶಿವಮೊಗ್ಗ 11ತುಮಕೂರು 89ಉಡುಪಿ 21ಉತ್ತರ ಕನ್ನಡ 32ವಿಜಯಪುರ 16ಯಾದಗಿರಿ 06