ಕೊರೋನಾ ಇಂದು ಕೊಂಚ ಏರಿಕೆ

ಬೆಂಗಳೂರು ನ. 14-ಕೆಲ ದಿನಗಳಿಂದರಾಜ್ಯದಲ್ಲಿ ಕರೋನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದ್ದು ಇಂದು ಸೋಂಕು ಪ್ರಕರಣಗಳು ನೆನ್ನೆಗಿಂತ ಕೊಂಚ ಏರಿಕೆ ಯಾಗಿದೆ. ಇಂದು ರಾಜ್ಯದಲ್ಲಿ 2154 ಜನರಿಗೆಸೊಂಕು ದೃಢ ಪಟ್ಟಿದೆ.


ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು2198 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 17 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ860082ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು820590ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 27965ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11508ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 773ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1195ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 356440ಕ್ಕೆ ಏರಿಕೆಯಾಗಿದೆ. ನಗರದಲ್ಲು ಕಳೆದ 24ಗಂಟೆಗಳಲ್ಲಿ ಸೊಂಕಿಗೆ 09ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3997ಕ್ಕೆ ಏರಿಕೆಯಾಗಿದೆ. ಇಂದು771ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು18184 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 08ಬಳ್ಳಾರಿ 34 ಬೆಳಗಾವಿ51ಬೆಂಗಳೂರು ಗ್ರಾಮಾಂತರ 60ಬೀದರ್03 ಚಾಮರಾಜನಗರ 14 ಚಿಕ್ಕಬಳ್ಳಾಪುರ 21 ಚಿಕ್ಕಮಗಳೂರು 17ಚಿತ್ರದುರ್ಗ 24ದಕ್ಷಿಣ ಕನ್ನಡ 40ದಾವಣಗೆರೆ 29ಧಾರವಾಡ 12 ಗದಗ 11ಹಾಸನ 103ಹಾವೇರಿ 20 ಕಲಬುರಗಿ 15ಕೊಡಗು 20ಕೋಲಾರ 39ಕೊಪ್ಪಳ 13 ಮಂಡ್ಯ 46ಮೈಸೂರು 137ರಾಯಚೂರು 19ರಾಮನಗರ 11ಶಿವಮೊಗ್ಗ 38ತುಮಕೂರು 61ಉಡುಪಿ 27ಉತ್ತರ ಕನ್ನಡ 42ವಿಜಯಪುರ 33ಯಾದಗಿರಿ 11