ಕೊರೋನಾ ಇಂದು ಕೊಂಚ ಏರಿಕೆ

ಬೆಂಗಳೂರು ನ. 10-ಕೆಲ ದಿನಗಳಿಂದರಾಜ್ಯದಲ್ಲಿ ಕರೋನಾ ಸೋಂಕಿನ ಆರ್ಭಟ ಕಡಿಮೆಯಾಗುತ್ತಿದ್ದು ಇಂದು ಸೋಂಕು ಪ್ರಕರಣಗಳು ನೆನ್ಚೆಗಿಂತ ಕೊಂಚ ಏರಿಕೆ ಯಾಗಿದೆ ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿ ಗುಣಮುಖರಾಗುವ ಸಂಖ್ಯೆಯುಹೆಚ್ಚಾಗಿದೆ
ಇಂದು ರಾಜ್ಯದಲ್ಲಿ 2362 ಜನರಿಗೆಸೊಂಕು ದೃಢ ಪಟ್ಟಿದೆ
ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದುರಾಜ್ಯದಲ್ಲಿ ಇಂದು4215 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 20 ಸೋಂಕಿತರು ಮೃತಪಟ್ಟಿದ್ದಾರೆ
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ851212ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು808700 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 31063 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11430ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 869 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1176ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 351481ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 08ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3969ಕ್ಕೆ ಏರಿಕೆಯಾಗಿದೆ. ಇಂದು2257ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17306 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 11ಬಳ್ಳಾರಿ 34 ಬೆಳಗಾವಿ30ಬೆಂಗಳೂರು ಗ್ರಾಮಾಂತರ 55ಬೀದರ್10 ಚಾಮರಾಜನಗರ 13 ಚಿಕ್ಕಬಳ್ಳಾಪುರ 57 ಚಿಕ್ಕಮಗಳೂರು 42ಚಿತ್ರದುರ್ಗ 31ದಕ್ಷಿಣ ಕನ್ನಡ 87ದಾವಣಗೆರೆ 29ಧಾರವಾಡ 18 ಗದಗ 06ಹಾಸನ 110ಹಾವೇರಿ 13 ಕಲಬುರಗಿ 09ಕೊಡಗು 07ಕೋಲಾರ 25ಕೊಪ್ಪಳ 16 ಮಂಡ್ಯ 86ಮೈಸೂರು 135ರಾಯಚೂರು 24ರಾಮನಗರ 27ಶಿವಮೊಗ್ಗ 25ತುಮಕೂರು 136ಉಡುಪಿ 27ಉತ್ತರ ಕನ್ನಡ 20ವಿಜಯಪುರ 78ಯಾದಗಿರಿ 25