ಕೊರೋನಾದಿಂದ ಶಾಸಕ ಬಂಡೆಪ್ಪ ಖಾಶೆಂಪುರ್ ಗುಣಮುಖ

ಬೀದರ, ನ.16: ಕೊರೋನಾ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಭಾನುವಾರ ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಕೆಲ ದಿನಗಳು ಹೋಂ ಕ್ವಾರೆಂಟೈನ್ ನಲ್ಲಿ ಇರುವಂತೆ ವೈದರು ಸಲಹೆ ನೀಡಿದ್ದು, ಅವರು ಬೆಂಗಳೂರಿನ ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೆಯಲಿದ್ದು, ಬಳಿಕ ಕ್ಷೇತ್ರದ ಜನತೆಯ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊದನ್ನು ಹರಿಬಿಟ್ಟಿರುವ ಬಂಡೆಪ್ಪ ಖಾಶೆಂಪೂರ್ ಅವರು, “ಎಲ್ಲರಿಗೂ ನಮಸ್ಕಾರ ತಾಯಿ ಭವಾನಿ ಮಾತೆಯ ಕೃಪೆ, ಹಿರಿಯರ ಆಶಿರ್ವಾದ, ತಮ್ಮೆಲ್ಲರ ಪ್ರೀತಿ ವಿಶ್ವಾಸದ ಫಲವಾಗಿ ಮತ್ತು ತಾವೆಲ್ಲರೂ ಸೇರಿ ಗುಡಿಗಳಲ್ಲಿ, ಮಸೀದಿ, ದರ್ಗಾಗಳಲ್ಲಿ, ಚರ್ಚಗಳಲ್ಲಿ ಸಲ್ಲಿಸಿದ ಪೂಜೆ, ಪ್ರಾರ್ಥನೆಗಳ ಫಲವಾಗಿ ನಾನು ಕೊರೊನಾ ವೈರಸ್‍ನಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ತಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು. ನಾನು ಈ ಹಿಂದೆನಂತೆಯೇ ಬಡವರ ಪರವಾಗಿ, ಶ್ರಮಿಕರ ಪರವಾಗಿ, ಕ್ಷೇತ್ರದ ಜನರ ಪರವಾಗಿ ದುಡಿಯುತ್ತೇನೆ. ಆದರೆ ಕೆಲ ದಿನಗಳ ಕಾಲ ಹೋಂ ಕ್ವಾರೆಂಟೆನ್‍ನಲ್ಲಿ ಇರುವಂತೆ ವೈದ್ಯರು ತಿಳಿಸಿದ್ದಾರೆ. ಹೋಂ ಕ್ವಾರೆಂಟೈನ್ ಬಳಿಕ ಮತ್ತೆ ನಿಮ್ಮ ಸೇವೆಯಲ್ಲಿ ನಾನು ತೊಡಗಿಕೊಳ್ಳುತ್ತೇನೆ ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು” ಎಂದು ತಿಳಿಸಿದ್ದಾರೆ.