ಕೊರೋನಾಗೆ ಉಚಿತ ಚಿಕಿತ್ಸೆ ನೀಡಲು ಆಗ್ರಹ

ಕೆಂಭಾವಿ:ಎ.28:ರಾಷ್ಟ್ರಾದ್ಯಾಂತ ಕೊರೊನಾ ರೋಗ ತೀವ್ರವಾಗಿ ಹರಡುತ್ತಿದೆ. ಬೇರೆ ರಾಜ್ಯಗಳಲ್ಲಿ ಕೊರೊನಾಗೆ ಉಚಿತ ಚಿಕಿತ್ಸೆ ನೀಡಿದಂತೆ ಕರ್ನಾಟಕದಲ್ಲಿಯೂ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ಆಗ್ರಹಿಸಿದೆ.

ಈ ಕುರಿತು ಉಪ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಕರವೆ ಪದಾಧಿಕಾರಿಗಳು, ರಾಜ್ಯದ ಜನರ ಆರೋಗ್ಯದ ಸುರಕ್ಷತೆ ಸರಕಾರದ ಜವಾಬ್ಧಾರಿಯಾಗಿದೆ. ಎಷ್ಟೊ ಜನರು ಕೊರೊನಾಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಅಸುನೀಗುತ್ತಿದ್ದಾರೆ. ಆದ್ದರಿಂದ ಸರಕಾರ ಪ್ರತಿಯೊಬ್ಬರಿಗೂ ಕೂಡಲೆ ಉಚಿತ ಚಿಕಿತ್ಸೆ ನೀಡಬೇಕು. ಅಂಬುಲೆನ್ಸ್, ಬೆಡ್, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಆಸ್ಪತ್ರೆಗಳಲ್ಲಿ ಹೆಚ್ಚಿಸಬೇಕು ಎಂದು ಕೊರಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಗೋಪಾಲಸಿಂಗ್ ಹಜೇರಿ, ಅಯ್ಯಣ್ಣ ಹೂಗಾರ, ಸುರೇಶ ಮಾಳಳ್ಳಿಕರ್, ರಮೇಶರೆಡ್ಡಿ, ಶಶಿಕುಮಾರ ಹೊಸಮನಿ, ಅನಿಲಕುಮಾರ, ಪರಶುರಾಮ ಹಾಗೂ ಯೋಗೇಶ ಪೂಜಾರಿ ಇದ್ದರು.