ಕೊರೋನದ ಬಗ್ಗೆ ಭಯಗ್ರಸ್ಥರಾಗಬೇಡಿ.

ಚಿತ್ರದುರ್ಗ. ಮೇ.೧೭; ಗ್ರಾಮಗಳಲ್ಲಿ ಕರೋನ ಸಂಖ್ಯೆ ಹೆಚ್ಚಳವಾಗುತ್ತಿದೆ, ಕರೊನ ರೋಗಕ್ಕಿಂತ ಅದರ ಭಯದಿಂದಲೇ ಹೆಚ್ಚು ಜನರ ಮರಣವಾದಂತೆ ಕಾಣುತ್ತಿದೆ. ದಿನ ನಿತ್ಯ ದೃಶ್ಯ ಮಾಧ್ಯಮಗಳಲ್ಲಿ ಬರುವ ಸಾವುನೋವುಗಳ ಸಂಖ್ಯೆ, ಆಸ್ಪತ್ರೆ ಮುಂದೆ ರೋಧಿಸುವ ಕುಟುಂಬದ ಸದಸ್ಯರ ದೃಶ್ಯಗಳು, ಕರೋನ ರೋಗಿಗಳ ಹೃದಯಬಡಿತವನ್ನು ಹೆಚ್ಚಿಸುತ್ತಿವೆ, ಅಂತವರಿಗೆ ದೈರ್ಯ ತುಂಬುವ ಕೆಲಸವಾಗಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ ಮತ್ತು ಜಿಲ್ಲಾ ಸಂಚಾರಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ “ಕರೋನ ಭಯದಿಂದ ಜನರನ್ನ ರಕ್ಷಿಸಿ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.ಗ್ರಾಮಸ್ಥರನ್ನ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಇರಿಸುವುದು ಬಹಳ ಕಷ್ಟಕರವಾದ ಕೆಲಸ, 7 ಲಕ್ಷ ಹಳ್ಳಿಗಳಿರುವ ಭಾರತದಲ್ಲಿ ಕರೋನ ಬಹಳ ವಿಸ್ತಾರದಲ್ಲಿ ಹರಡಿದರೇ ನಿಯಂತ್ರಣ ಕಷ್ಟಕರ, ಜನರಲ್ಲಿ ಉಳಿತಾಯದ ಪ್ರಮಾಣ ಕಡಿಮೆ ಇರುವುದರಿಂದ ತಕ್ಷಣದ ಲಾಕ್ ಡೌನ್ ಅವರ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ, ದುಡಿಮೆಯ ನೆಪದಲ್ಲಿ ನಗರಗಳಿಗೆೆ ವಲಸೆ ಹೋಗಿ ಬಿಡುತ್ತಾರೆ. ಅವರನ್ನ ಗ್ರಾಮಗಳಲ್ಲೇ ಸಬಲಗೊಳಿಸುವ ಕೆಲಸವಾಗಬೇಕು ಎಂದರು.ನಮ್ಮ ದೇಶದಲ್ಲಿ ಕರೋನ ಸುಲಭವಾಗಿ ಹರಡುತ್ತಿರುವುದಕ್ಕೆ ಕಾರಣ ಜನರ ಬಡತನ ಮತ್ತು ನಿರುದ್ಯೋಗ ಸಮಸ್ಯೆ, ಅವರನ್ನ ಅಲೆದಾಡುವಂತೆ ಮಾಡುತ್ತಿದೆ. ಅವರ ಪ್ರಾಣ ರಕ್ಷಣೆ ನಮ್ಮೇಲ್ಲರ ಜವಾಬ್ದಾರಿ, ಅವರ ಆರ್ಥಿಕ ಸಂಕಷ್ಟಕ್ಕೆ ನಾವು ಬೇಗ ಸ್ಪಂದಿಸಬೇಕು. ಗ್ರಾಮೀಣ ಜನರಿಗೆ ಆರ್ಥಿಕ ಸುಭದ್ರತೆ ಮತ್ತು ಆಹಾರ ಭದ್ರತೆಯನ್ನು ಕೂಡಲೇ ಒದಗಿಸಿ ಕೊಡಬೇಕಾಗುತ್ತದೆ. ಅದಕ್ಕಾಗಿ ಸರಕಾರದ ಜತೆ, ಸಂಘ ಸಂಸ್ಥೆಗಳು, ದಾನಿಗಳು ಸಹ ಕೈಜೋಡಿಸಿ ಬೇಕಾಗುತ್ತದೆ ಎಂದರುಮಾಧ್ಯಮಗಳು ಜನ ಜಾಗೃತಿಯ ಕಾರ್ಯಕ್ರಮಗಳನ್ನು ಅವಿರತವಾಗಿ ಬಿತ್ತರಿಸಿದರೆ ಮಾತ್ರ ಜನರಲ್ಲಿ ವೈಜ್ಞಾನಿಕ ಅರಿವಿನ ಮಟ್ಟ ಹೆಚ್ಚಾಗುತ್ತದೆ. ವೈದ್ಯರಿಂದ ಹೆಚ್ಚು ಸಂದರ್ಶನಗಳನ್ನು ಏರ್ಪಡಿಸಿ, ರೋಗ ತಡೆಯುವ ಮಾರ್ಗಗಳ ಬಗ್ಗೆ, ಲಸಿಕೆಗಳು ಮತ್ತು ಔಷಧಗಳ ಬಗ್ಗೆ ಅರಿವು ಹೆಚ್ಚಿಸಬೇಕು ಎಂದರು. ಮಾಸ್ಕ್ ಅನ್ನೇ ವೇಷಭೂಷಣ ಮಾಡಿಕೊಂಡು, ಕರೋನಾ ಬಗೆಗೆ ಜನ ಜಾಗೃತಿ ಗೀತೆಗಳನ್ನು ಹಾಡಿದ ಎಚ್.ಎಸ್. ರಚನಾ ಮತ್ತು ಎಚ್.ಎಸ್. ಪ್ರೇರಣಾ, ದಾರಿಹೋಕರಿಗೆ ಕರೋನಾ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಕರ್ಫ್ಯೂ ನಿಮಗಾಗಿ, ಲಾಕ್ ಡೌನಿಗೆ ಸಹಕರಿಸಿ, ಹತ್ತು ದಿನ ಮನೇಲಿರಿ, ಅಂತರ ಕಾಪಾಡಿಕೊಳ್ಳಿ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಘು. ಟಿ. ಸಂಚಾರಿ ಪೋಲಿಸ್ ಸಿಬ್ಬಂದಿ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಹಂಜಿ ಕಾರ್ಯಗಾರದ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರಮೇಶ್ ವೈ ಇಟಗಿ, ಕೆಜೆವಿಸ್‌ನ ಜಿಲ್ಲಾ ಉಪಾಧ್ಯಕ್ಷರಾದ ಜಯದೇವ ಮೂರ್ತಿ ಹಾಜರಿದ್ದರು.