ಕೊರೋನಕ್ಕೆ ಎಸ್‌ಐ ಬಲಿಶಾಸಕ ಹರತಾಳು ಹಾಲಪ್ಪ ಸಂತಾಪ

ಹೊಸನಗರ.ಜೂ.೫;  ಮಹಾಮಾರಿ ಕೊರೋನ ರೋಗಕ್ಕೆ ಪೊಲೀಸ್ ಸಬ್ ಇನ್‌ಸ್ಪೇಕ್ಟರ್ ಬಲಿ ಆಗಿರುವ ಘಟನೆ ವರದಿಯಾಗಿದೆ. ಹಾಲಿ ಭದ್ರಾವತಿ ಪೇಪರ್ ಟೌನ್ ಠಾಣೆನಲ್ಲಿ ಟ್ರಾಫಿಕ್ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಬಿ.ರಮೇಶ್ ಕೊರೋನ ಸೊಂಕಿಗೆ ತುತ್ತಾಗಿ ಸೇವೆಯಲ್ಲಿ ಇರುವಾಗಲೇ ಮೃತಪಟ್ಟಿದ್ದಾರೆ. ಮೂಲತ: ಸಾಗರ ತಾಲೂಕಿನ ಬಾಳೆಗುಂಡಿ ಗ್ರಾಮದ ಇವರು ಪೊಲೀಸ್ ಇಲಾಖೆ ಸೇರಿದ ಬಳಿಕ ಕಾರ್ಗಲ್, ಸೊರಬ, ಹೊಸನಗರದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ಎಸೈ ಆಗಿ ಪದೊನ್ನತಿ ಹೊಂದಿ ಭದ್ರಾವತಿಗೆ ವರ್ಗಾವಣೆಗೊಂಡಿದ್ದರು. ನೇರ ನಡೆ, ನುಡಿ, ಸೌಮ್ಯ ಸ್ವಭಾವದ ಇವರು ಜನಾನುರಾಗಿ ಆಗಿದ್ದರು.ಸಂತಾಪ; ತಮ್ಮ ಕಾಲೇಜು ದಿನಗಳಲ್ಲಿ ರೂಂ ಮೆಟ್ ಆಗಿದ್ದ ಎಸ್‌ಐ ರಮೇಶ್ ಅವರ ಅಗಲಿಕೆ ವಿಷಯ ಮನಸ್ಸಿಗೆ ತೀವ್ರ ನೋವು ತಂದಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಹಾಗೂ ಕುಟುಂಬ ವರ್ಗಕ್ಕೆ ದೇವರು ದುಖ; ಭರಿಸುವ ಶಕ್ತಿ ನೀಡಲೆಂದು ಮಾಜಿ ಸಚಿವ, ರಾಜ್ಯ ಎಂಎಸ್‌ಐಎಲ್ ಸಂಸ್ಥೆಯ ಅಧ್ಯಕ್ಷ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಂತಾಪ ಸೂಚಿಸಿದ್ದಾರೆ.