ಕೊರೊನ ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿ ಆಚರಣೆ

ರಾಯಚೂರು.ಜ.೧೪.ಕೊರೊನ ಹಿನ್ನಲೆಯಲ್ಲಿ ಸಂಕ್ರಾಂತಿಯ ಸಡಗರ ನಗರರಲ್ಲಿ ಇಂದಿನಿಂದಲೇ ಮಂದಗತಿಯಲ್ಲಿ ಆರಂಧ ಗೊಂಡಿದ್ದು ಸಂಕ್ರಾಂತಿಯ ಭೋಗಿಯಯನ್ನು ಕುಟುಂಬಸ್ಥರು ತಮ್ಮ ಮನೆಯ ಮುಂದೆ ಆಚರಿಸಿದರು.
ಹಿಂದುಗಳ ವರ್ಷದ ಮೊದಲ ಅತಿದೊಡ್ಡ ಹಬ್ಬ ಸಂಕ್ರಾಂತಿ ಇದಾಗಿದ್ದು ಕೃಷಿಕರ ಸುಗ್ಗಿ ಹಬ್ಬವಾಗಿದೆ ಪ್ರತಿ ವರ್ಷ ಸಂಕ್ರಾಂತಿ ಹಬ್ಬದಂದು ಸಾರ್ವಜನಿಕರು ನದಿಯಲ್ಲಿ ಎಳ್ಳು ಹಚ್ಚಿಕೊಂಡು ಸ್ನಾನ ಮಾಡುವ ಮೂಲಕ ವರ್ಷಪೂರ್ತಿ ಶುಭ ಹಾರೈಸಿ.ಶೇಂಗಾ ವಿಶೇಷ ಪೂಜೆ , ಪುನಸ್ಕಾರ ಮಾಡಲಾಗುತ್ತಿತ್ತು.
ಆದರೆ ಕೊರೊನ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಬಾರಿ ನದಿಸ್ನಾನ ಮಾಡುವುದು ಅನುಮಾನವಾಗಿದೆ.
ಮಾರ್ಕೆಟ್ ನಲ್ಲಿ ಈ ಬಾರಿ ಸಾರ್ವಜನಿಕ ತರಕಾರಿ ಹಾಗೂ ಇನ್ನಿತರ ಪದಾರ್ಥಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ರೈತರಿಗೆ ಈ ಬಾರಿ ಒಳ್ಳೆಯ ಬೆಳೆ ಬಂದಿದ್ದು ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದರೆ ಕೊರೊನ ಅಡ್ಡಿ ಉಂಟು ಮಾಡಿದೆ. ಅದ ಕಾರಣ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ಮುಂಜಾನೆ ಮುನೆ ವೈಶಿಷ್ಟತೆ, ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ , ಸಿರಿಧಾನ್ಯಗಳ ಚಿಕ್ಕ ರಾಶಿ ಇಟ್ಟು ಪೂಜೆ ಮಾಡಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಅತ್ಯಂತ ವಿಜೃಂಭಣೆಯಿಂದ ಆದರಿಸಲಾಗುತ್ತದೆ,ಜಿಲ್ಲೆಯಲ್ಲಿ ಈ ಬಾರಿ ತುಸು ಮಂದಗತಿಯಲ್ಲಿ ಆಚರಿಸಲಾಗುವುದು ಎಂದು ಎದ್ದು ಕಾಣುತ್ತಿದೆ.