ಕೊರೊನ ನಿಯಂತ್ರಣಕ್ಕಾಗಿ ಸಹಾಯವಾಣಿ ರಚನೆ

ಜಗಳೂರು.ಮೇ.೧೮: ಕೊರೊನ ಎರಡನೇ ಅಲೆ ನಿಯಂತ್ರಣಕ್ಕಾಗಿ ಬಿಜೆಪಿ ಪಕ್ಷದಿಂದ ಸಹಾಯವಾಣಿ ರಚಿಸಲಾಗಿದೆ ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ .ಮಹೇಶ್ ಪಲ್ಲಾಗಟ್ಟೆ ತಿಳಿಸಿದ್ದಾರೆ.ವಿಧಾನ ಸಭಾ ಕ್ಷೇತ್ರದಲ್ಲಿ ಕೊರೊನ ಮಹಾಮಾರಿ ಎರಡನೇ ಅಲೆ ಇದೇ ತಿಂಗಳಲ್ಲಿ ಅತಿಹೆಚ್ಚು ಉಲ್ಬಣವಾಗಿದ್ದು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರದಲ್ಲಿ ಅಗತ್ಯ ಆಹಾರ ದಾಸ್ತಾನುಗಳನ್ನು ಪಡೆದುಕೊಳ್ಳಬೇಕು.ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು.ಈಗಾಗಲೆ ಶಾಸಕ ಎಸ್ ವಿ ರಾಮಚಂದ್ರ ಅವರು ಕ್ಷೇತ್ರದ ಜನತೆಯ ಬಗ್ಗೆ ವಿಶೇಷ ಕಾಳಜಿವಹಿಸಿ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮುಂಜಾಗ್ರತಾ ಕ್ರಮವಹಿಸಲು ಸೂಚಿಸಿದ್ದಾರೆ.ಕೊವಿಡ್ ಕೇರ್ ಸೆಂಟರ್ ಗೆ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಸಕಲ ಸಿದ್ದತೆಯೊಂದಿಗೆ ನಿರ್ವಹಿಸಲು ತಿಳಿಸಿದ್ದಾರೆ.ತಾಲೂಕು ಆಸ್ಪತ್ರೆಯಲ್ಲಿ ಕೊರೊನ ಸೊಂಕಿತರಿಗೆ ಸೂಕ್ತ ಚಿಕಿತ್ಸೆ ಬೆಡ್ ವ್ಯವಸ್ಥೆ , ವ್ಯಾಕ್ಸಿನ್,ಮೆಡಿಸೆನ್,ಆಕ್ಸಿಜನ್ ಗಳ ಪೂರೈಕೆಗೆ ಅಧಿಕಾರಿಗಳ ಮೂಲಕ ವ್ಯವಸ್ಥೆ ಕಲ್ಪಿಸಿದ್ದಾರೆ.ಶಾಸಕರಿಗೂ ಕೊವಿಡ್ ಪಾಸಿಟಿವ್ ವರದಿ ಬಂದ ಹಿನ್ನೆಲೆ ಹೋಂ ಐಸೋಲೇಷನ್ ನಲ್ಲಿದ್ದಾರೆ.ಇದೀಗ ಗುಣಮುಖರಾಗಿದ್ದು ಆಡಳಿತದ ಬಗ್ಗೆ ಅಧಿಕಾರಿಗಳ ಜೊತೆ ಸದಾ ಸಂಪರ್ಕದಲ್ಲಿದ್ದಾರೆ. 45 ವರ್ಷ ಮೇಲ್ಪಟ್ಟು ವಯೋಮಾನದವರು ಎರಡನೇ ಡೋಸ್ ಮೊದಲನೆ ಆದ್ಯತೆಯೊಂದಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.