ಕೊರೊನಾ ಹೆಸರಿನಲ್ಲಿ ಸರ್ಕಾರ ಹಣ ಲೂಟಿ-ಆರೋಪ

ರಾಯಚೂರು.ಏ.೨೧-ಸರ್ಕಾರವು ಕೊರೊನಾ ಹೆಸರಿನಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಂಡು ಹಣ ವಸೂಲಿ ಮಾಡುತ್ತಿದ್ದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚುತ್ತಿದ್ದು ಜಿಲ್ಲೆಯಲ್ಲಿ ರೈತನೊರ್ವನು ಆಸ್ಪತ್ರೆಗೆ ಬಂದಿದ್ದು ಆಸ್ಪತ್ರೆಯ ಸಿಬ್ಬಂದಿಗಳ ಬೇಜವಾಬ್ದಾರಿ ಪಾಸಿಟಿವ್ ಬಂದಿರದ ರೈತನಿಗೆ ಪಾಸಿಟಿವ್ ಬಂದಿದೆ ಎಂದು ರಿಪೋರ್ಟ್ ನೀಡಿದ್ದು ವಿಷಯ ತಿಳಿದ ರೈತ ಮೃತಪಟ್ಟಿದ್ದಾರೆ. ಕೊಡಲೇ ಸರ್ಕಾರ ಮೃತಪಟ್ಟ ರೈತನ ಕುಟುಂಬಕ್ಕೆ ಪರಿಹಾರ ನೀಡಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಕ್ತ ಕ್ರಮ ವಹಿಸಬೇಕು ಎಂದರು.
ರಾಜ್ಯದಲ್ಲಿ ಭತ್ತದ ಬೆಲೆ ಕುಸಿದಿದ್ದು ರೈತರಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ, ಭತ್ತದ ತವಾಡಿಗೆ ೨೫೦೦ ಬೆಲೆ ಇದೆ ಆದರೆ ಭತ್ತಕ್ಕೆ ಇಲ್ಲದಂತಾಗಿದೆ,ಸರ್ಕಾರ ಕ್ವಿಂಟಲ್ ಗೆ ೧೫೫೮ ರೂ ಇದೆ ಕೊರೊನಾ ಹೆಸರಿನಲ್ಲಿ ಸರ್ಕಾರ ಹಣ ಲೂಟಿ ಮಾಡುತ್ತಿದ್ದೆ ಪಂಜಾಬ್ ರಾಜ್ಯದಲ್ಲಿ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಳೆಗಿಂತ ಕಡಿಮೆ ದರದಲ್ಲಿ ಖರೀದಿ ಮಾಡಿದರೆ ಅವರಿಗೆ ೩ ವರ್ಷ ಜೈಲು ಮಾಡಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಕಾನೂನು ಜಾರಿಗೆ ತರಬೇಕು.
ಆಲಿಕಲ್ಲು ಮಳೆಯಿಂದ ಬೆಳೆಗಳು ಹಾಳಾಗಿವೆ ಸರ್ಕಾರ ಎಕರೆಗೆ ೫ ರೂ ಅಂತೆ ಪರಿಹಾರ ನೀಡಬೇಕು. ಇತ್ತೀಚಿಗೆ ನಾನು ಸುಮಾರು ೩೦ ಪ್ರಶ್ನೆಗಳನ್ನು ಸರ್ಕಾರಕ್ಕೆ ಪತ್ರದ ಮೂಲಕ ಬರೆದು ಕಲಿಸಿದ್ದೇನೆ. ಆದರೆ ನನಗೆ ಮಾಹಿತಿ ನೀಡಿಲ್ಲ. ಸರ್ಕಾರ ಈ ೩೦ ಪ್ರಶ್ನೆಗಳಿಗೆ ಉತ್ತರ ನೀಡಿದರೆ ರೈತರು ಯಾವುದೇ ಕಾರಣಕ್ಕೆ ಸಾಲ ಮಾಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ನರಸಪ್ಪ ದೇವಸೂಗೂರು, ಮಹದೇವ, ತಿಮ್ಮಣ್ಣ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.